ಹೈದರಾಬಾದ್:- ತೆಲಂಗಾಣದ ಮಿರ್ಯಾಲ್ಗುಡ ಪಟ್ಟಣದಲ್ಲಿ ಹೈದರಾಬಾದ್ನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ 25 ವರ್ಷದ ಮಹಿಳೆಯೊಬ್ಬರು ರೈಲಿನಿಂದ ಬಿದ್ದು ಗಾಯಗೊಂಡಿರುವ ಘಟನೆ ಜರುಗಿದೆ
ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಕಿರಿಕ್: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪೋಷಕರು!
ರೈಲಿನಲ್ಲಿ ಕುಡುಕ ವ್ಯಕ್ತಿಯೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆಕೆ ಕೆಳಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಆ ಮಹಿಳೆ ಏಕಾಂಗಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ವಿಶಾಖ ಎಕ್ಸ್ಪ್ರೆಸ್ ಮಿರ್ಯಾಲಗುಡ ರೈಲ್ವೆ ನಿಲ್ದಾಣವನ್ನು ದಾಟಿದಾಗ ಈ ಘಟನೆ ನಡೆದಿದೆ. ಆಕೆಯೊಂದಿಗೆ 30 ವರ್ಷದ ಆರೋಪಿಯೂ ರೈಲಿನ ಸ್ಲೀಪರ್ ಕೋಚ್ನಿಂದ ಬಿದ್ದು ಗಾಯಗೊಂಡಿದ್ದಾನೆ. ಆ ಕುಡುಕ ಮತ್ತು ಮಹಿಳೆ ಇಬ್ಬರನ್ನೂ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ.
ಈ ವಿಷಯ ತಿಳಿದ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಕೋಚ್ ಬಳಿ ಕೈ ತೊಳೆದುಕೊಂಡು ಹಿಂತಿರುಗುತ್ತಿದ್ದ ವೇಳೆ ಕೋಚ್ನಲ್ಲಿ ಬಾಗಿಲ ಬಳಿ ನಿಂತಿದ್ದ ಕುಡುಕ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಮೈಕೈ ಮುಟ್ಟಿದ್ದಾರೆ. ಆಗ ಆಕೆ ಕೆಳಗೆ ಹಾರಿ ಬಿದ್ದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.