ಕ್ರಿಕೆಟ್ನ ಜೀವಾಳ ಎಂದರೆ ಅದು ಟೆಸ್ಟ್ ಕ್ರಿಕೆಟ್. ಆದರೆ, ದಿನ ಕಳೆದಂತೆ ಟೆಸ್ಟ್ ಕ್ರಿಕೆಟ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಅದರಲ್ಲೂ ಜಗತ್ತಿಗೆ ಟಿ20 ಕ್ರಿಕೆಟ್ ಪರಿಚಯವಾದ ಬಳಿಕ ಟೆಸ್ಟ್ ಕ್ರಿಕೆಟ್ ಮೂಲೆಗುಂಪಾಗಿದೆ.
ಟೆಸ್ಟ್ ಕ್ರಿಕೆಟ್ಗೆ ಜೀವ ತುಂಬುವ ಉದ್ದೇಶದಿಂದ 2021ರಲ್ಲಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಆರಂಭಿಸಿತು. ಎರಡು ವರ್ಷಗಳಿಗೊಮ್ಮೆ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಆಯೋಜಿಸುತ್ತಿದೆ. ಆದರೂ ಟೆಲಿವಿಷನ್ ವೀಕ್ಷಕರ ಸಂಖ್ಯೆಯಾಗಲಿ, ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಾಗಲಿ ಹೆಚ್ಚಾಗಲಿಲ್ಲ. ಹೀಗಾಗಿ ಟೆಸ್ಟ್ ಕ್ರಿಕೆಟ್ನ ಭವಿಷ್ಯದ ಬಗ್ಗೆ ಈಗ ಕಳವಳ ಹೆಚ್ಚಾಗಿದೆ.
ಮತ್ತೊಮ್ಮೆ ಕನ್ನಡಿಗರ ಮನಗೆದ್ದ ರಾಹುಲ್ ದ್ರಾವಿಡ್: BCCI ನೀಡಿದ್ದ ಹಣ ಬೇಡವೆಂದ ವಾಲ್!
ಈ ಬಗ್ಗೆ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಕಳೆಗುಂದುತ್ತಿರುವ ದೀರ್ಘಾವಧಿಯ ಕ್ರಿಕೆಟ್ ಮಾದರಿಗೆ ಜೀವ ತುಂಬಲು ವಿಶೇಷ ಸಲಹೆ ಒಂದನ್ನು ನೀಡಿದ್ದಾರೆ. ಮೆರ್ಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಿದ್ದ ವರ್ಡ್ ಕ್ರಿಕೆಟ್ ಕನೆಕ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರಗಳ ಸಂಖ್ಯೆಯನ್ನು 6-7ಕ್ಕೆ ಸೀಮಿತಗೊಳಿಸುವಂತೆ ಸಲಹೆ ನೀಡಿದ್ದಾರೆ.
“ಗುಣಮಟ್ಟ ಇಲ್ಲದೇ ಇದ್ದಾಗ ಅಲ್ಲಿ ಆಕರ್ಷಣೆ ಕೂಡ ಕುಸಿಯುತ್ತದೆ. ಕ್ರೀಡಾಂಗನದಲ್ಲಿ ಕೆಲವೇ ಪ್ರೇಕ್ಷಕರನ್ನು ಮಾತ್ರ ಕಾಣುತ್ತಿದ್ದೇವೆ. ಕ್ರೀಡೆಗೆ ಅಪಾಯದ ಸೂಚನೆ ಇದು. ಸದ್ಯ ಟೆಸ್ಟ್ ಕ್ರಿಕೆಟ್ ಆಡುವ 12 ತಂಡಗಳಿವೆ. ಇದನ್ನು 6 ಅಥವಾ 7ಕ್ಕೆ ಇಳಿಸಿ. ಬಳಿಕ ಟೆಸ್ಟ್ ಕ್ರಿಕೆಟ್ನ ಪ್ರಚಾರ ಶುರು ಮಾಡಿ. ಟೆಸ್ಟ್ ಕ್ರಿಕೆಟ್ಗೆ ಇದರ ಅಗತ್ಯವಿಲ್ಲ,” ಎಂದು ರವಿ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.