ಬೆಂಗಳೂರು: ವಿದೇಶಿ ಚಾಕೊಲೇಟ್ ಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಮಾರುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನರೇಂದ್ರ ಬಂಧಿತ ಆರೋಪಿಯಾಗಿದ್ದು ವಿದೇಶದಿಂದ ಚಾಕೊಲೇಟ್ ತರಿಸಿಕೊಂಡು food safety and standards authority of indiaದ ನಕಲಿ ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗೋಡೌನ್ ನಲ್ಲಿ ಚಾಕೊಲೇಟ್, ಇತರೆ ಪದಾರ್ಥಗಳನ್ನು ಶೇಖರಿಸಿಟ್ಟಿದ್ದ ಆರೋಪಿ
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಬಂಧಿತನಿಂದ 1 ಕೋಟಿಗೂ ಅಧಿಕ ಮೌಕ್ಯದ ಚಾಕೊಲೇಟ್, ಇತರೆ ವಸ್ತುಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗೋಡೌನ್ ನನ್ನು ಲಾಕ್ ಮಾಡಿದ್ದಾರೆ.