ಲೈಂಗಿಕತೆ ಒಂದು ರೀತಿ ಹಸಿವು ಮತ್ತು ದಾಹವಿದ್ದಂತೆ. ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸಿದರೂ ಮತ್ತೆ, ಮತ್ತೆ ಬೇಕನಿಸುತ್ತದೆ. ಅಲ್ಲದೇ ಇದರ ಹಸಿವು ಮತ್ತು ದಾಹ ತೀರುವುದಿಲ್ಲ. ಜೊತೆಗೆ ಮನುಕುಲದ ಉಳಿವಿಗೆ ಲೈಂಗಿಕತೆ ಬಹಳ ಮುಖ್ಯ
ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಪ್ರತಿಯೊಬ್ಬರೂ ತಮ್ಮ ದೇಹ ಮತ್ತು ಆರೋಗ್ಯವನ್ನು ಅವಲಂಬಿಸಿ ಕೆಲವು ಮಿತಿಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ನೀವು ಹೆಚ್ಚಾಗಿ ಲೈಂಗಿಕತೆಯನ್ನು ಹೊಂದಿದ್ದರೆ ಕೆಲವು ತೊಂದರೆಗಳು ಉಂಟಾಗುತ್ತವೆ.
ಆದರೆ ಅತಿಯಾದ ಸೆಕ್ಸ್ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ತ್ರೀ ಜನನಾಂಗದ ಪ್ರದೇಶದಲ್ಲಿ ಊತ ಉಂಟಾಗುತ್ತದೆ. ಈ ಸಮಸ್ಯೆಗಳಿಂದ ಅನೇಕ ಮಹಿಳೆಯರು ಲೈಂಗಿಕತೆಯ ಸಮಸಯದಲ್ಲಿ ದೂರ ಉಳಿಯಲು ಇಷ್ಟಪಡುತ್ತಾರೆ.
ವಾಸ್ತವವಾಗಿ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಂಭೋಗ ನಡೆಸಿದರೆ ಜನನಾಂಗಗಳಲ್ಲಿ ಲ್ಯೂಬ್ ಕ್ಷೀಣಿಸುತ್ತದೆ. ದಿನಕ್ಕೆ ಒಮ್ಮೆ ಇದು ದೀರ್ಘಕಾಲದವರೆಗಿನ ಲೈಂಗಿಕತೆಯ ನಂತರ ಬಿಡುಗಡೆಯಾಗುತ್ತದೆ. ನೀವು ತಕ್ಷಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, ನಯಗೊಳಿಸುವಿಕೆ ಕಡಿಮೆಯಾಗುತ್ತದೆ ಮತ್ತು ನೋವಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಸಮಯದಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ತಕ್ಷಣ ಮಾಡಬೇಡಿ.
ಆಗಾಗ್ಗೆ ಸಂಭೋಗಿಸುವ ಮಹಿಳೆಯರಿಗೆ ಮೂತ್ರಕೋಶ ಮತ್ತು ಯೋನಿ ಸೋಂಕುಗಳು ಬೆಳೆಯುವ ಸಾಧ್ಯತೆ ಹೆಚ್ಚು. ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ. ಇದರೊಂದಿಗೆ ಯೋನಿಯಲ್ಲಿ ಉರಿ, ಮೂತ್ರದ ಹರಿವು, ದುರ್ವಾಸನೆ, ತುರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ವೆಳೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಮುಟ್ಟು ನಿಂತ್ಮೇಲೆ ಮಹಿಳೆಯರಿಗೆ ಹೆಚ್ಚುತ್ತಾ ಕಾಮಾಸಕ್ತಿ?: ಮುಟ್ಟು ನಿಂತ ಮೇಲೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೋ ಅಥವಾ ಕಡಿಮೆ ಆಗುತ್ತೋ ಎಂಬ ಬಗ್ಗೆ ಅನೇಕ ಮಂದಿ ಗೊಂದಲ ಹೊಂದಿದ್ದಾರೆ. ಅದರಲ್ಲೂ ಈ ಬಗ್ಗೆ ಮಹಿಳೆಯರಲ್ಲೇ ಗೊಂದಲಗಳು ಹೆಚ್ಚಾಗಿದ್ದು, ಅನೇಕ ಮಹಿಳೆಯರು ಪಿರಿಯಡ್ಸ್ ನಂತರ ಕಾಮಾಸಕ್ತಿ ಕಡಿಮೆ ಆಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಕೆಲ ಮಹಿಳೆಯರಿಗೆ ಋತು ಚಕ್ರದ ನಂತರವೇ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಮುಟ್ಟು ನಿಂತ ನಂತರ ಗರ್ಭಿಣಿಯಾಗುವ ಸಾಧ್ಯತೆ ಇಲ್ಲದೇ ಇರುವುದರಿಂದ ಕೆಲ ಮಹಿಳೆಯರಿಗೆ ಇದು ಟೆನ್ಷನ್ ಫ್ರೀ ಸಮಯವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೇ ತಮ್ಮ ಸಂಗಾತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಇಚ್ಛಿಸುತ್ತಾರೆ. ಅಲ್ಲದೇ ಕೆಲ ಹಾರ್ಮೋನ್ ಬದಲಾವಣೆಗಳಿಂದ ಕೂಡ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಲೈಂಗಿಕ ಚಟುವಟಿಕೆ ಬಗ್ಗೆ ಆಸಕ್ತಿ ಹೊಂದುವುದು ತಪ್ಪು ಎಂಬ ಭಾವನೆ ಅನೇಕ ಮಹಿಳೆಯರಲ್ಲಿದೆ. ಆದರೆ ಇದು ಅಪರಾಧವಲ್ಲ. ಹಾಗಂತ ಲೈಂಗಿಕ ಆಸಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಮುಂದೊಂದು ದಿನ ಈ ವಿಚಾರದಿಂದಲೇ ಸಂಕಷ್ಟದಲ್ಲಿ ಸಿಲುಕಬೇಕಾಗುತ್ತದೆ.