ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.
ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಸರಿಯಾದ ಮನೆಮದ್ದುಗಳನ್ನು ಬಳಸಿದರೆ, ನಾವು ಈ ಹಳದಿ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು ಮತ್ತು ನಮ್ಮ ಹಲ್ಲುಗಳ ನೈಸರ್ಗಿಕ ಬಿಳಿಯನ್ನು ಮತ್ತೆ ಪಡೆಯಬಹುದು. ಇದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಹಾಗಾದರೆ, ಇಲ್ಲಿದೆ ನೋಡಿ ಕೆಲವು ಸರಳ ಪರಿಹಾರಗಳು
ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ನಿಖಿಲ್ ಕುಮಾರಸ್ವಾಮಿ
ಆಯಿಲ್ ಪುಲ್ಲಿಂಗ್
ಆಯಿಲ್ ಪುಲ್ಲಿಂಗ್ ಒಂದು ಪ್ರಾಚೀನ ಆಯುರ್ವೇದ ಅಭ್ಯಾಸವಾಗಿದ್ದು, ಅದರ ಹಲ್ಲಿನ ಆರೋಗ್ಯವನ್ನು ಕಾಪಾಡಲು ಹೆಸರುವಾಸಿಯಾಗಿದೆ.
ಬಳಸುವುದು ಹೇಗೆ*:*
ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.
ಸುಮಾರು 15-20 ನಿಮಿಷಗಳ ಕಾಲ ಅದನ್ನು ನಿಮ್ಮ ಬಾಯಿಗೆ ಅತ್ತಿಂದಿತ್ತ ಆಡಿಸಿ.
ನಂತರ ಆ ಎಣ್ಣೆಯನ್ನು ಉಗುಳು ಮತ್ತು ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆಯಿರಿ.
ಎಂದಿನಂತೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ
ಅಡಿಗೆ ಸೋಡಾ
ಅಡಿಗೆ ಸೋಡಾ ಹಲ್ಲುಗಳನ್ನು ಬಿಳುಪುಗೊಳಿಸುವ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೇಲ್ಮೈ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.
ಬಳಸುವುದು ಹೇಗೆ:
ನಿಂಬೆ ಹುಳಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ
ತಯಾರಾದ ಪೇಸ್ಟ್ ನಿಂದ ಹಲ್ಲನ್ನು ಉಜ್ಜಿ
ಐದು ನಿಮಿಷ ಇದನ್ನು ಹಾಗೆ ಬಿಡಿ
ನಂತರ, ಶುದ್ಧ ನೀರಿನಿಂದ ತೊಳೆಯಿರಿ
ಆಪಲ್ ಸೈಡರ್ ವಿನೆಗರ್ (ACV) ಒಂದು ಬಗೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಎಂದೇ ಹೇಳಬಹುದು. ಇದರಲ್ಲಿರುವ ಆಮ್ಲೀಯ ಅಂಶವು ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಒಟ್ಟಾರೆ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.
ಒಂದು ಚಮಚ ಅಡಿಗೆ ಸೋಡಾವನ್ನು ಎರಡು ಚಮಚ ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ, ಹಲ್ಲುಗಳಿಗೆ ಹಚ್ಚಿ, ಎರಡು ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ.
ನಂತರ, ಅದನ್ನು ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ.
ಹಲ್ಲುಗಳಿಗೆ ಉಂಟಾಗುವ ಹಾನಿಯ್ನನು ತಪ್ಪಿಸಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಬಹುದು.
ಹಿಂದೆಲ್ಲಾ ಹಲ್ಲುಗಳನ್ನು ಸ್ವಚ್ಚಗೊಳಿಸಲು ಇದ್ದಿಲ್ಲನ್ನು ಬಳಸುತ್ತಿದ್ದುದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ. ಈಗಲೂ ಕೆಲವೆಡೆ, ಇದರ ಬಳಕೆ ರೂಢಿಯಲ್ಲಿದೆ. ಇದು ಹಲ್ಲುಗಳನ್ನು ಬಿಳುಪುಗೊಳಿಸುವ ಜನಪ್ರಿಯ ಆಯ್ಕೆ ಎಂದರೆ ತಪ್ಪಾಗಲಾರದು.
ಸ್ಟ್ರಾಬೆರಿ ಹಣ್ಣಿನಲ್ಲಿ ಮ್ಯಾಲಿಕ್ ಆಮ್ಲ ಇರುವುದರಿಂದ ಹಲ್ಲುಗಳ ಕಲೆಗಳನ್ನು ತೆಗೆಯಲಯ ಪರಿಣಾಮಕಾರಿ ವಿಧಾನ ಎನ್ನಬಹುದು.
ಬಳಸುವುದು ಹೇಗೆ.
ಬೇಕಿಂಗ್ ಸೋಡಾ ಮತ್ತು ಮಾಗಿದ ಸ್ಟ್ರಾಬೆರಿ ಹಣ್ಣು ತೆಗೆದು ಕೊಂಡು ಕಿವುಚಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ
ಅದನ್ನು ಹಲ್ಲುಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ
ಆನಂತರ ಸ್ವಚ್ಚ ನೀರಿನಿಂದ ಬಾಯಿ ತೊಳೆದುಕೊಳ್ಳಿ