ರಾಮನಗರ ಜಿಲ್ಲೆಯ ಶಿವನಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಪೋಸ್ಟ್ಗಳಿಗೆ ಕರೆಯಲಾಗಿದ್ದು ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಹುದ್ದೆಗಳ ಕುರಿತು ಹೆಚ್ಚಿನ ವಿವರ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
HDFC Bank: ಕ್ರೆಡಿಟ್ ಕಾರ್ಡ್ ಸಂಬಂಧಿ ಶುಲ್ಕಗಳು ಮತ್ತು ನಿಯಮಗಳಲ್ಲಿ ಬದಲಾವಣೆ: ಆ.1ರಿಂದ ಜಾರಿ
ಹುದ್ದೆಗಳ ವಿವರ
- ಪೋಸ್ಟ್ ಗ್ರಾಜುಯೇಟ್ ಟೀಚರ್ : ಇತಿಹಾಸ ವಿಷಯ
- ಟ್ರೈನ್ಡ್ ಗ್ರಾಜುಯೇಟ್ ಟೀಚರ್ : ಇಂಗ್ಲಿಷ್
- ಟ್ರೈನ್ಡ್ ಗ್ರಾಜುಯೇಟ್ ಟೀಚರ್ : ಸಂಗೀತ
- ಟ್ರೈನ್ಡ್ ಗ್ರಾಜುಯೇಟ್ ಟೀಚರ್ : ಕಂಪ್ಯೂಟರ್ ಸೈನ್ಸ್
- ಇತರೆ ಹುದ್ದೆಗಳು : ಮಹಿಳಾ ಸ್ಟಾಫ್ ನರ್ಸ್, Matron
ಸಂದರ್ಶನಕ್ಕೆ ಹಾಜರಾಗುವವರಿಗೆ ಸೂಚನೆಗಳು
ಈ ಹುದ್ದೆಗಳನ್ನು 2024-25 ಸಾಲಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಮೇಲೆ ತಿಳಿಸಲಾದ ನಿಗದಿತ ದಿನಾಂಕದಂದು ಆಸಕ್ತರು ತಮ್ಮ ಮೂಲ ದಾಖಲೆಗಳ ಜತೆಗೆ, ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಸಂದರ್ಶನ ವೇಳೆ ಹಾಜರುಪಡಿಸಬೇಕು.
ನೇಮಕಾತಿ ಪ್ರಾಧಿಕಾರ: ಜವಾಹರ ನವೋದಯ ವಿದ್ಯಾಲಯ, ಶಿವನಹಳ್ಳಿ
ಹುದ್ದೆಗಳು: ವಿವಿಧ ವಿಷಯ ಶಿಕ್ಷಕರು, ಇತರೆ ಸಿಬ್ಬಂದಿಗಳು.
ನೇಮಕಾತಿ ವಿಧಾನ:ನೇರ ಸಂದರ್ಶನದ ಮೂಲಕ.
ನೇರ ಸಂದರ್ಶನ ದಿನಾಂಕ: 15-07-2024.
ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ಸಮಯ:ಬೆಳಗ್ಗೆ 11-00 ಗಂಟೆಗೆ.
ಹುದ್ದೆವಾರು ಶೈಕ್ಷಣಿಕ ಅರ್ಹತೆಗಳು
ಪೋಸ್ಟ್ ಗ್ರಾಜುಯೇಟ್ ಟೀಚರ್ : ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು. ಹಿಂದಿ, ಇಂಗ್ಲಿಷ್ನಲ್ಲಿ ಬೋಧಿಸಲು ಸಿದ್ಧರಿರಬೇಕು. 35 ವರ್ಷ ವಯಸ್ಸು ಮೀರಿರಬಾರದು.
ಟ್ರೈನ್ಡ್ ಗ್ರಾಜುಯೇಟ್ ಟೀಚರ್ : ಹುದ್ದೆಗೆ ಸಂಬಂಧಿತ ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು. 35 ವರ್ಷ ವಯಸ್ಸು ಮೀರಿರಬಾರದು.
ಮಹಿಳಾ ಸ್ಟಾಫ್ ನರ್ಸ್ : ಬಿಎಸ್ಸಿ ನರ್ಸಿಂಗ್ ಪಾಸ್. ಜತೆಗೆ ನರ್ಸಿಂಗ್ ವೃತ್ತಿಗೆ ರಿಜಿಸ್ಟರ್ ಮಾಡಿರಬೇಕು. ಜತೆಗೆ 2.5 ವರ್ಷ ವೃತ್ತಿ ಅನುಭವ ಹೊಂದಿರಬೇಕು.
Matron : ದ್ವಿತೀಯ ಪಿಯುಸಿ ಪಾಸ್. 30-45 ವರ್ಷ ಗರಿಷ್ಠ ವಯಸ್ಸಿನ ಅರ್ಹತೆ ನಿಗದಿ ಮಾಡಲಾಗಿದೆ.
ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿಗಳಾದ ವೇತನ, ಅರ್ಹತೆಗಳು, ಇತರೆ ಮಾನದಂಡಗಳ ಕುರಿತು ತಿಳಿಯಲು ವೆಬ್ಸೈಟ್ ವಿಳಾಸ https://www.navodaya.gov.in/nvs/nvs-school/RAMANAGARA/en/home