ನವದೆಹಲಿ: ಆರೋಗ್ಯವೇ ಮಹಾಭಾಗ್ಯ, ಆದರೆ ಇತ್ತೀಚಿನ ಕಾಲದಲ್ಲಿ ಮಾರಣಾಂತಿಕ ರೋಗಗಳು ಕೊನೆಯ ಹಂತದಲ್ಲಿ ಪತ್ತೆಯಾಗಿ ಪ್ರಾಣಕ್ಕೆ ಕುತ್ತು ತರುತ್ತಿದೆ. ಮನುಷ್ಯನ ಆರೋಗ್ಯವಾಗಿದ್ದರೂ ಗೊತ್ತಾಗದಂತೆ ದೇಹದಲ್ಲಿ ಕೆಲ ಕಾಯಿಲೆಗಳು ಸಾವಿನ ಕದ ತಟ್ಟುವಂತೆ ಮಾಡುತ್ತಿದೆ. ಆದ್ರೆ ದೇಶದಲ್ಲಿ ಹೆಚ್ಚುತ್ತಿರುವ ಎಚ್ಐವಿ ಪ್ರಕರಣಗಳು ಸಾರ್ವಜನಿಕ ಕಳವಳವನ್ನು ಗಮನಾರ್ಹವಾಗಿ ಹೆಚ್ಚಿಸಿವೆ . ತ್ರಿಪುರಾದಲ್ಲಿ ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡುತ್ತಿರುವ ವರದಿಗಳು ಹೊರಬಂದಿವೆ.
ಈಶಾನ್ಯ ರಾಜ್ಯವಾದ ತ್ರಿಪುರದ ಶಾಲಾ- ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಲ್ಲಿ 47 ಸ್ಟೂಡೆಂಟ್ಸ್ ಸಾವನ್ನಪ್ಪಿರುವುದು ಭಾರೀ ಆತಂಕ ಮೂಡಿಸಿದೆ. ಮಕ್ಕಳು ಕಾಲೇಜಿನಲ್ಲಿ ಓದ್ತಿದ್ದಾರೆ ಎಂದುಕೊಂಡ ಪೋಷಕರಿಗೆ ಈ ಸುದ್ದಿ ಆಘಾತ ತಂದಿದೆ.
Ola Drops Google Maps: ಇನ್ನುಂದೆ ಓಲಾ ಕ್ಯಾಬ್ಸ್ʼನಲ್ಲಿ ಗೂಗಲ್ ಮ್ಯಾಪ್ಸ್ ಇರುವುದಿಲ್ಲ..! ಯಾಕೆ ಗೊತ್ತಾ..?
ನಮ್ಮ ನೋಂದಣಿಯಲ್ಲಿ ಒಟ್ಟು 828 ವಿದ್ಯಾರ್ಥಿಗಳಿಗೆ ಹೆಚ್ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿನ 47 ವಿದ್ಯಾರ್ಥಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 572 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ತ್ರಿಪುರದ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ತಿಳಿಸಿದ್ದಾರೆ.
ರಾಜ್ಯದ 220 ಶಾಲೆಗಳು, 24 ಕಾಲೇಜುಗಳು ಹಾಗೂ ಯುನಿರ್ವಸಿಟಿಯಲ್ಲಿ ಓದುವ ವಿದ್ಯಾರ್ಥಿಗಳು ಡ್ರಗ್ಸ್ ಇಂಜೆಕ್ಷನ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಹೆಚ್ಐವಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಎಲ್ಲ ಶಾಲಾ-ಕಾಲೇಜುಗಳನ್ನು ನಾವು ಪತ್ತೆ ಮಾಡಿದ್ದು ಅಲ್ಲಿನ ಹಲವು ವಿದ್ಯಾರ್ಥಿಗಳು ಆ ಡ್ರಗ್ಗೆ ಅಡಿಕ್ಟಿಡ್ ಆಗಿದ್ದಾರೆ. ನಾವು ರಾಜ್ಯಾದ್ಯಂತ ಒಟ್ಟು 164 ಆರೋಗ್ಯ ಕೇಂದ್ರಗಳಿಂದ ಈ ಡೇಟಾ ಸಂಗ್ರಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.