ಚಂಡೀಗಢ: ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಮಾಯಕರಿಗೆ ಮೋಸ ಮಾಡುತ್ತಾರೆ. ಕೆಲಸ ಸಿಗುತ್ತೆ ಎಂಬ ಆಸೆಯಿಂದ ಹಣ ನೀಡಿ ಮೋಸಕ್ಕೆ ಒಳಗಾದವರ ಉದಾಹರಣೆಗಳು ನಮ್ಮ ಮುಂದಿವೆ. ಕೆಲವರು ಏಜೆನ್ಸಿ ಆರಂಭಿಸಿ ಮೋಸ ಮಾಡುತ್ತಿರುತ್ತಾರೆ.
ಕೆಲ ದಿನಗಳ ಹಿಂದೆ ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ ಲಕ್ಷಾಂತರ ರೂಪಾಯಿ ಸಂಪಾದಿಸಿ ಎಂಬ ಜಾಹೀರಾತು ಪೊಲೀಸರು ಗಮನಕ್ಕೂ ಬಂದಿತ್ತು. ಜಾಹೀರಾತು ಬೆನ್ನತ್ತಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಕಲಿ ಖಾತೆಗಳ ಮೂಲಕ ಜಾಹೀರಾತು ಪ್ರಕಟಣೆ
ಪೊಲೀಸರ ತನಿಖೆ ವೇಳೆ ನಿರುದ್ಯೋಗಿಗಳನ್ನು ಮೋಸ ಮಾಡುವ ಉದ್ದೇಶದಿಂದಲೇ ಈ ಜಾಹೀರಾತು ಪ್ರಕಟಿಸಲಾಗಿತ್ತು ಎಂದು ತಿಳಿದು ಬಂದಿದೆ. ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಜಾಜ್ ಮತ್ತು ಇರ್ಷಾದ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್..!
ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭದರಿಸುವಂತೆ ಮಾಡುವ ಜಾಹೀರಾತು ಇದಾಗಿತ್ತು. ಆರೋಪಿಗಳು ಮಹಿಳೆಯರ ನಕಲಿ ಫೋಟೋಗಳನ್ನು ಜಾಹೀರಾತಿಗೆ ಬಳಸಿಕೊಂಡಿದ್ದರು. ಪೊಲೀಸ್ ತನಿಖೆಯಲ್ಲಿ ಆರೋಪಿಗಳು ಸೋಶಿಯಲ್ ಮೀಡಿಯಾದಲ್ಲಿ ನಾಲ್ಕು ನಕಲಿ ಖಾತೆಗಳನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಿಬ್ಬರು ನ್ಯಾಯಾಂಗ ಬಂಧನಕ್ಕೆ
ಜಾಹೀರಾತು ನೋಡಿ ತಮ್ಮನ್ನು ಸಂಪರ್ಕಿಸುವ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಶುಲ್ಕ ತುಂಬುವಂತೆ ಹೇಳುತ್ತಿದ್ದರು. ಫೀಸ್ ತುಂಬಿ ರಿಜಿಸ್ಟರ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿತ್ತು. ನಕಲಿ ಫೇಸ್ಬುಕ್ ಖಾತೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ ಎಂದು ಪೊಲೀಸರು ಹೇಳಿದ್ದಾರೆ.