ಮಾಸ್ಕೋ:- 22ನೇ ಭಾರತ-ರಷ್ಯಾ ಶೃಂಗಸಭೆಯ ಹಿನ್ನೆಲೆ ರಷ್ಯಾಗೆ ಬಂದಿಳಿದ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಇದೇ ವೇಳೆ ಮೋದಿಗೆ ರಷ್ಯಾ ಸೇನಾಪಡೆ ಗೌರವ ವಂದನೆ ಸಲ್ಲಿಸಿತು. ಬಳಿಕ ರಷ್ಯಾ ಉಪಪ್ರಧಾನಿ ಡೆನಿಸ್ ಮೆಂಟ್ರೋ ಮೋದಿಯನ್ನು ಬರಮಾಡಿಕೊಂಡರು.
ನನ್ನ ಜೀವನದಲ್ಲಿ ಮದುವೆ ಕೆಟ್ಟ ನೆನಪಾಗಿ ಉಳಿದುಕೊಂಡಿದೆ: ಚಂದನ್ ಶೆಟ್ಟಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಶೃಂಗಸಭೆಯನ್ನು ನಡೆಸಲು ಮೋದಿ ಸೋಮವಾರ ಮಾಸ್ಕೋಗೆ ಆಗಮಿಸಿದರು. ಮೋದಿ ಮತ್ತು ಅಧ್ಯಕ್ಷ ಪುಟಿನ್ ಮಂಗಳವಾರ ಮತ್ತೆ ಭೇಟಿಯಾಗಲಿದ್ದು, ಇಂಧನ, ವ್ಯಾಪಾರ, ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಮೋದಿ ವಿಮಾನ ನಿಲ್ದಾಣದಿಂದ ಹೋಟೆಲ್ಗೆ ತೆರಳಿದ ಬಳಿಕ ಹೊರಾಂಗಣದಲ್ಲಿ ದಾಂಡಿಯಾ ನೃತ್ಯದ ಮೂಲಕ ಮೋದಿಯನ್ನು ಸ್ವಾಗತಿಸಲಾಯಿತು. ಹೋಟೆಲ್ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸೋಮವಾರ ರಾತ್ರಿ ಅಧ್ಯಕ್ಷ ಪುಟಿನ್ ಮೋದಿಗಾಗಿ ಖಾಸಗಿ ಔತಣಕೂಟ ಸಹ ಆಯೋಜಿಸಿದ್ದಾರೆ.
ಮಂಗಳವಾರ, ಮೋದಿ ಅವರು ಅಧ್ಯಕ್ಷ ಪುಟಿನ್ ಅವರೊಂದಿಗೆ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಶೃಂಗಸಭೆಯ ಬಳಿಕ ಜು.9ರಂದು ಪ್ರಧಾನಿ ಮೋದಿ ಆಸ್ಟ್ರಿಯಾದತ್ತ ಪ್ರಯಾಣ ಬೆಳೆಸಲಿದ್ದಾರೆ. ಕಳೆದ 40 ವರ್ಷದಲ್ಲಿ ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿರುವ ಮೊದಲ ಪ್ರಧಾನಿ ಎಂಬ ಗರಿಮೆಗೆ ಮೋದಿ ಪಾತ್ರರಾಗುತ್ತಿದ್ದಾರೆ.