ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ ಎಂದು ನಿರ್ಮಾಪಕ ಕೆ ಮಂಜೂ ಹೇಳಿಕೆ ನೀಡಿದ್ದಾರೆ.
Breaking News: ಬಿಜೆಪಿ ನಾಯಕ ಬಿಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!
ಇಂದು ಜೈಲಿಗೆ ಭೇಟಿ ನೀಡಿ ದರ್ಶನ್ ರನ್ನು ಮಾತನಾಡಿಸಿದ ಬಳಿಕ ಮಾತನಾಡಿದ ಅವರು, ಕೊಲೆ ಕೇಸ್ ವಿಚಾರ ಯಾವ ರೀತಿ ಏನೂ ಮಾಡಬೇಕು ದರ್ಶನ್ ಗೆ ತಿಳಿಯುತ್ತಿಲ್ಲ. ಕಷ್ಟ ಸುಖ ಮಾತನಾಡಿದ್ವಿ. ಇನ್ನೂ ಸ್ವಲ್ಪ ದಿನ ಎಲ್ಲಾ ಗೊತ್ತಾಗುತ್ತೆ. ನೋವಿನಲ್ಲಿದ್ದು, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಎಂತಹವರಿಗೂ ಬೇಸರ. ತಪ್ಪು ಮಾಡಿಲ್ಲ ಅಂತಾ ನಮ್ಮ ಬಳಿ ಹೇಳಿಲ್ಲ ನಾವು ತಿಳಿದುಕೊಳ್ಳಬೇಕು. ಮಾತನಾಡುವ ವೇಳೆ ತಿಳಿದುಕೊಳ್ಳಬೇಕು. ನಟ ದರ್ಶನ್ ಸಣ್ಣ ಆಗಿಲ್ಲ. ಡಿಸ್ಟರ್ಬ್ ಮಾಡೋದು ಬೇಡ ಅಂತಾ ಯಾರೂ ಭೇಟಿಗೆ ಬರ್ತಿಲ್ಲ.
ರೇಣುಕಾಸ್ವಾಮಿ ಕೊಲೆ ಬಗ್ಗೆ ಇನ್ನೂ ಅವರಿಗೆ ಕ್ಲಾರಿಟಿ ಇಲ್ಲ. ಪರಮಾತ್ಮನಿಗೆ ಮಾತ್ರ ಗೊತ್ತು ಎಂದರು.
ಇನ್ನೂ ನೋವಿನಲ್ಲು ಸನ್ನಡತೆ ಖೈದಿಗಳ ಬಿಡುಗಡೆ ಬಗ್ಗೆ ಮಾತನಾಡಿ, ನಾಳೆ ಜೈಲಿಗೆ ಗೃಹಮಂತ್ರಿಗಳು ಬರುತ್ತಿರುವ ಬಗ್ಗೆ ಮಾತಾಡಿದರು. ಬೇಲ್ ವಿಚಾರವಾಗಿ ಮಾತುಕತೆ ನಡೆದಿಲ್ಲ. ಸಿನಿಮಾ ಪ್ರಾಜೆಕ್ಟ್ಗಳ ಬಗ್ಗೆ ಮಾತುಕತೆ ನಡೆದಿಲ್ಲ. ಕಷ್ಟ ನೋವಿನಲ್ಲಿ ಸಿನಿಮಾ ಮಾಡಿ ಅಂತಾ ಹೇಳೋಕೆ ಆಗುತ್ತಾ. ಆದ್ರೂ ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂದ್ರು. ಸಾಮಾನ್ಯ ಭೇಟಿ ಅಷ್ಟೆ ತಿಂಗಳಿಂದ ಭೇಟಿ ಮಾಡಲಿಕ್ಕೆ ಆಗಿರಲಿಲ್ಲ. ನಟ ದರ್ಶನ್ ಭೇಟಿ ಬಳಿಕ ನಿರ್ಮಾಪಕ ಕೆ ಮಂಜು ಜೈಲಿನ ಬಳಿ ಹೇಳಿಕೆ ನೀಡಿದ್ದಾರೆ.