ಕೆಲವರು ಇಲಿ ಕಚ್ಚಿದರೆ ಮಾತ್ರ ಜ್ವರ ಬರುತ್ತದೆ ಎಂದು ಕೊಂಡಿರುತ್ತಾರೆ ಆದರೆ ಅದು ತಪ್ಪು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು. ಕೆಲವೊಮ್ಮೆ ಇಲಿ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಹೊರಹಾಕುವಂತಹ ದ್ರವಗಳು ಕೂಡ ನಿಮಗೆ ಹಾನಿಕಾರಕವಾಗಬಹುದು. ಅದೂ ಅಲ್ಲದೆ ಇಲಿಯನ್ನು ತಿನ್ನುವ ನಿಮ್ಮ ಸಾಕು ಪ್ರಾಣಿಗಳು ಕೂಡ ನಿಮಗೆ ಈ ರೋಗ ತರಬಹುದು. ಹಾಗಾಗಿ ಬೆಕ್ಕು, ನಾಯಿ ಇವುಗಳಿಂದ ನೀವು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.
ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ 66 ಲಕ್ಷ ಸಂಗ್ರಹ!
ಇಲಿ ಜ್ವರ ಹೇಗೆ ತಡೆಗಟ್ಟಬೇಕು?
ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
ಸಾಧ್ಯವಾದಷ್ಟು ನಿಮ್ಮ ಮನೆ ಅಥವಾ ಸುತ್ತಮುತ್ತ ಇಲಿಗಳು ಬರದಂತೆ ನೋಡಿಕೊಳ್ಳಿ.
ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಮುಚ್ಚಿ ಇರಿಸಿ.
ಮನೆಯಲ್ಲಿ ಇಲಿಗಳ ಮಲ ಬಿದ್ದಿದ್ದರೆ ಅದನ್ನು ಮೊದಲು ಸ್ವಚ್ಛ ಮಾಡಿ ಬಳಿಕ ಅಲ್ಲಿ ಸೋಂಕು ವಿರೋಧಿ ದ್ರವ ಸಿಂಪಡಿಸಿ.
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಆಹಾರ ಕೊಡುವ ವಿಚಾರದಲ್ಲಿ ಎಚ್ಚರ ಇರಲಿ. ಆದಷ್ಟು ಸ್ವಚ್ಛತೆ ಕಾಪಾಡಿ.
ಒಂದು ವೇಳೆ ನಿಮಗೆ ಇಲಿಗಳು ಪರಚಿದ ಹಾಗೂ ಕಚ್ಚಿದ ಗಾಯಗಳು ಕಂಡು ಬಂದರೆ ಮೊದಲು ಆ ಜಾಗವನ್ನು ಸೋಪು ಮತ್ತು ಬಿಸಿ ನೀರಿನಿಂದ ತೊಳೆಯಿರಿ. ಬಳಿಕ ತಕ್ಷಣವೇ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.
ದೇಹದ ಯಾವುದೇ ಭಾಗದಲ್ಲಿ ಮೊದಲೇ ಗಾಯವಾಗಿದ್ದರೆ ಅದನ್ನು ಸಾಧ್ಯವಾದಷ್ಟು ಬ್ಯಾಂಡೇಜ್ ಮಾಡಿ ಇಡಿ. ಇಲಿಗಳು ಹೆಚ್ಚಾಗಿರುವ ಜಾಗದಿಂದ ಸಾಧ್ಯವಾದಷ್ಟು ದೂರವಿರಿ.
ಡೆಂಗ್ಯೂ ಮತ್ತು ಇಲಿ ಜ್ವರದ ರೋಗಲಕ್ಷಣಗಳು ಒಂದೇ ರೀತಿ ಇರುವುದರಿಂದ ಸರಿಯಾದ ರೋಗನಿರ್ಣಯ ಮಾಡುವುದು ಮುಖ್ಯವಾಗುತ್ತದೆ. ಹಾಗಾಗಿ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಡೆದುಕೊಳ್ಳಿ.