ದಾವಣೆಗೆರೆ: ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಕೆ.ಜಿ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿ ಸಿ ಪಾಟೀಲ್ ದೊಡ್ಡ ಮಗಳ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹೊನ್ನಾಳಿ ತಾಲ್ಲೂಕ್ ಅರಕೆರೆ ಸಮೀಪದ ಫಾರೆಸ್ಟ್ ನಲ್ಲಿ ಕಾರಿನಲ್ಲಿ ವಿಷಸೇವನೆ ಮಾಡಿದ್ದು,
ವಿಷಯ ತಳಿದ ತಕ್ಷಣ ವಿಷ ಸೇವಿಸಿದ ಬಳಿಕ ಕೆ.ಜಿ ಪ್ರತಾಪ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.