ಚಂಡೀಗಢ: ಹರಿಯಾಣದ ಪಂಚಕುಲದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸುಮಾರು 40ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಪಂಚಕುಲದ ಪಿಂಜೋರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಹರಿಯಾಣ ರೋಡ್ವೇಸ್ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ.
Ladyfinger Benefits: ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆ ಯಾವ ರೀತಿ ಸಹಾಯ ಮಾಡುತ್ತೆ ಗೊತ್ತಾ..?
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಪಿಂಜೋರ್ ಆಸ್ಪತ್ರೆಗೆ ಮತ್ತು ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅಪಘಾತಕ್ಕೆ ಬಸ್ ಚಾಲಕನ ಅತಿ ವೇಗವೇ ಕಾರಣ ಎನ್ನಲಾಗಿದೆ. ಬಸ್ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಅಂದರೆ ಓವರ್ಲೋಡ್ ಮತ್ತು ರಸ್ತೆಯ ಕಳಪೆ ಸ್ಥಿತಿ ಕೂಡ ಅಪಘಾತಕ್ಕೆ ಹೆಚ್ಚುವರಿ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.
https://x.com/ANI/status/1810167665551438078?ref_src=twsrc%5Etfw%7Ctwcamp%5Etweetembed%7Ctwterm%5E1810167665551438078%7Ctwgr%5Ebbcff1069dc9b593e01f20b28882afda38bc4dfa%7Ctwcon%5Es1_&ref_url=https%3A%2F%2Fpublictv.in%2Faround-40-school-students-injured-after-a-bus-overturns-near-pinjore-in-haryana%2F