ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಇದೀಗ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಸೂಪರ್ ಸ್ಟಾರ್ ಬಾಲಯ್ಯ ಪುತ್ರನ ಸಿನಿಮಾದಲ್ಲಿ ಶ್ರೀಲೀಲಾಗೆ ನಟಿಸೋ ಚಾನ್ಸ್ ಸಿಕ್ಕಿದೆ.
ತೆಲುಗಿನ ಜೊತೆ ತಮಿಳಿನಲ್ಲೂ ಶ್ರೀಲೀಲಾಗೆ ಆಫರ್ ಸಿಕ್ಕಿದೆ. ಜೊತೆಗೆ ಬಾಲಿವುಡ್ ಸಿನಿಮಾರಂಗದಲ್ಲಿ ನಟಿಸುವ ಚಾನ್ಸ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದರ ನಡುವೆ ಬಾಲಯ್ಯ ಪುತ್ರ ಮೋಕ್ಷಜ್ಞ ಬೆಳ್ಳಿಪರದೆಯಲ್ಲಿ ನಾಯಕ ನಟನಾಗಿ ಮಿಂಚಲು ವೇದಿಕೆ ಕೂಡ ಸಿದ್ಧವಾಗಿದೆ. ನಾಯಕನಾಗಿ ಪಳಗಲು ಏನೆಲ್ಲಾ ತಯಾರಿ ಬೇಕೋ ಅದನ್ನೇಲ್ಲಾ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಬಾಲಯ್ಯ ಮಗನ ಚೊಚ್ಚಲ ಚಿತ್ರಕ್ಕೆ ಪ್ರತಿಭಾನ್ವಿತ ನಟಿ ಶ್ರೀಲೀಲಾನೇ ಸೂಕ್ತ ಎಂದು ನಟಿಗೆ ಆಫರ್ ನೀಡಲಾಗಿದೆ.
ಮೊದಲ ಸಿನಿಮಾವಾಗಿರುವ ಕಾರಣ, ಉತ್ತಮ ಕಥೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯಡಿ ಮೋಕ್ಷಜ್ಷ ಲಾಂಚ್ ಆಗ್ತಿದ್ದಾರೆ. ‘ಭಗವಂತ ಕೇಸರಿ’ ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಯ್ಯ ಮಗಳ ಪಾತ್ರದಲ್ಲಿ ನಟಿಸಿದ್ದರು. ಆಗಲೇ ನಟಿಗೆ ನಟನೆಯ ಮೇಲಿರುವ ಶ್ರದ್ಧೆ ನೋಡಿ ಈಕೆಯೇ ಸೂಕ್ತ ಎಂದು ಮಗನ ಚಿತ್ರಕ್ಕೆ ನಾಯಕಿಯಾಗಿ ಬಾಲಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ.
ಸದ್ಯ ನಿತಿನ್ ಜೊತೆ ‘ರಾಬಿನ್ಹುಡ್’ ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ ಜೊತೆಗಿನ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ‘ಜ್ಯೂನಿಯರ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ದವಾಗಿದೆ.
ಇವುಗಳ ಜೊತೆಗೆ ತಮಿಳಿನ ಅಜಿತ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೂ ಶ್ರೀಲೀಲಾ ನಾಯಕಿ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಗೂ ಈಕೆಯೇ ಹೀರೋಯಿನ್ ಎಂಬ ಸುದ್ದಿ ಹರಿದಾಡ್ತಿದೆ. ಒಟ್ನಲ್ಲಿ ಶ್ರೀಲೀಲಾಗೆ ಆಫರ್ ಗಳ ಮೇಲೆ ಆಫರ್ ಗಳು ಬರ್ತಿದ್ದು ನಟಿ ಫುಲ್ ಖುಷಿಯಲ್ಲಿದ್ದಾರೆ.