ಬೆಂಗಳೂರು:- ರಾಜ್ಯದಾದ್ಯಂತ ಇಂದು 159 ಮಂದಿಗೆ ಡೆಂಗ್ಯೂ ದೃಢವಾಗಿದ್ದು, ಬೆಂಗಳೂರಲ್ಲೇ ಹೆಚ್ಚು ಕೇಸ್ ಧೃಡವಾಗಿದೆ
Bommai: ಮುಡಾ ಪ್ರಕರಣ ನ್ಯಾಯಾಧೀಶರಿಂದ ತನಿಖೆಯಾಗಲಿ – ಸಂಸದ ಬೊಮ್ಮಾಯಿ!
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 954 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 159 ಮಂದಿಯಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 80, ಚಿಕ್ಕಬಳ್ಳಾಪುರ – 08, ತುಮಕೂರು – 12, ದಾವಣಗೆರೆ – 10, ಗದಗ – 5, ಯಾದಗಿರಿ – 2, ಬೀದರ್ – 13, ಕೊಪ್ಪಳ – 1, ಹಾಸನ – 03, ಚಿಕ್ಕಮಗಳೂರು – 25 ಪ್ರಕರಣಗಳು ಪತ್ತೆಯಾಗಿವೆ