ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗುರುತುಗಳನ್ನು ತಡೆಯಲು ನೆರವಾಗುವ ಪದಾರ್ಥಗಳ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ. ಅವರ ಪ್ರಕಾರ ಮೂರು ಪದಾರ್ಥಗಳನ್ನು ಬಳಸಿ ಸಾಮಾನ್ಯವಾಗಿ ನಿಮ್ಮ ಮನೆಯಲ್ಲೇ ಕಲೆಗಳನ್ನು ಹೋಗಲಾಡಿಸಬಹುದು. ಅದುವೇ ತೆಂಗಿನ ಎಣ್ಣೆ, ಅಲೋವೆರಾ ಮತ್ತು ನಿಂಬೆ ರಸ..
ನಿರಂತರ ಮಳೆಗೆ ಬಟ್ಟೆ ಒಣಗುತ್ತಿಲ್ಲವೇ?..ಹಾಗಿದ್ರೆ ನಾವು ಹೇಳುವ ಈ ಟ್ರಿಕ್ಸ್ ಫಾಲೋ ಮಾಡಿ!
ತೆಂಗಿನ ಎಣ್ಣೆ
ಕರಾವಳಿಯಲ್ಲಿ ಹೆಚ್ಚಾಗಿ ಬಳಕೆಯಾಗುವ ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲದೆ ಚರ್ಮಕ್ಕೂ ಒಳ್ಳೆಯದು. ಕೊಬ್ಬಿನಾಮ್ಲಗಳಿಂದ ತುಂಬಿರುವ ತೆಂಗಿನೆಣ್ಣೆ ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಈಗಲೂ ಹಳ್ಳಿಗಳಲ್ಲಿ ಕೆಲವೊಬ್ಬರು ತ್ವಚೆಯನ್ನು ತೇವಗೊಳಿಸಲು ಮತ್ತು ಪೋಷಿಸಲು ತೆಂಗಿನ ಎಣ್ಣೆ ಬಳಸುತ್ತಾರೆ. ಇದು ಚರ್ಮದಲ್ಲಿರುವ ಸ್ಟ್ರೆಚ್ ಗುರುತುಗಳನ್ನು ತಡೆಯಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ಕಾಯಿಸಿ ಮತ್ತು ಅದನ್ನು ಮಾರ್ಕ್ ಇರುವ ಚರ್ಮದ ಮೇಲೆ ಮಸಾಜ್ ಮಾಡಿ. ಗರ್ಭಿಣಿಯಾಗಿದ್ದರೆ ಹೊಟ್ಟೆ, ತೊಡೆಗಳು ಮತ್ತು ಸ್ತನಗಳಂತಹ ಪ್ರದೇಶಗಳನ್ನು ನಾಜೂಕಾಗಿ ಮಸಾಜ್ ಮಾಡಿ. ನಿತ್ಯವೂ ಈ ಅಭ್ಯಾಸವನ್ನು ಸ್ನಾನದ ನಂತರ ಅಭ್ಯಾಸ ಮಾಡಿದರೆ ಒಳ್ಳೆಯದು.
ಅಲೋವೆರಾ ಜೆಲ್
ಅಲೋವೆರಾದಲ್ಲಿ ವಿಟಮಿನ್, ಖನಿಜಗಳು ಮತ್ತು ಚರ್ಮವನ್ನು ಪೋಷಿಸುವ ಮತ್ತು ಅದರ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳಿವೆ. ಮಾರುಕಟ್ಟೆಯಲ್ಲಿ ಇದರ ಜೆಲ್ ಸಿಗುತ್ತದೆ. ಇದರ ಬದಲಿಗೆ ಮನೆಯಲ್ಲೇ ಬೆಳೆದ ನೈಸರ್ಗಿಕ ಆಲೋವೆರಾವನ್ನು ಬಳಸಿದರೆ ಭಾರಿ ಒಳ್ಳೆಯದು. ಸ್ಟ್ರೆಚ್ ಗುರುತುಗಳನ್ನು ತಡೆಗಟ್ಟಲು ಮನೆಯಲ್ಲೇ ಸಿಗಬಹುದಾದ ಸರಳ ಪರಿಹಾರವಿದು. ಕೋಡಿನಂಥಾ ಎಲೆಯನ್ನು ಕತ್ತರಿಸಿ ಅದರ ಜೆಲ್ ತೆಗೆಯಿರಿ. ಅದನ್ನು ಪ್ರತಿದಿನವೂ ಕಲೆ ಗುರುತುಗಳಿಗೆ ಹಚ್ಚಿ ಸುಮಾರು 20ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ಬಳಿಕ ತೊಳೆಯಿರಿ
ಜೇನುತುಪ್ಪ ಮತ್ತು ನಿಂಬೆ ರಸ
ನಿಂಬೆಹಣ್ಣು ತ್ವಚೆಯ ಆರೈಕೆಗಾಗಿ ಹಲವರು ಬಳಸುತ್ತಾರೆ. ಜೇನುತುಪ್ಪದ ಬಳಕೆಯೂ ಹೊಟ್ಟೆ ಮತ್ತು ತ್ವಚೆಯ ಕಾರಣಕ್ಕೆ ಆಗುತ್ತಿರುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಬೆಂಬಲಿಸುತ್ತದೆ. ನಿಂಬೆ ರಸಕ್ಕೆ ಅಷ್ಟೇ ಪ್ರಮಾಣದ ನೀರು ಸೇರಿಸಿ ಅದಕ್ಕೆ ಅಷ್ಟೇ ಸಮಾನ ಪ್ರಮಾಣದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ. ಜೇನುತುಪ್ಪವು ತೇವಾಂಶ ಉಳಿಸಿಕೊಳ್ಳುತ್ತದೆ. ಹೀಗಾಗಿ ಸ್ಟ್ರೆಚ್ ಮಾರ್ಕ್ ತಡೆಗಟ್ಟಲು ಇದು ಉತ್ತಮ. ಈ ಮಿಶ್ರಣವನ್ನು ಆ ಗುರುತುಗಳಿಗೆ ಹಚ್ಚಿ. 10ರಿಂದ 15 ನಿಮಿಷಗಳ ಕಾಲ ಬಿಟ್ಟು ಬಳಿಕ ತೊಳೆಯಿರಿ. ಚರ್ಮಕ್ಕೆ ನಿಂಬೆ ರಸ ಬಳಸಿದ ನಂತರ ಸೂರ್ಯನ ಬೆಳಕಿನಿಂದ ದೂರ ಇರುವುದನ್ನು ಮರೆಯಬೇಡಿ.