ವಾಸ್ತವವಾಗಿ, ಖರ್ಜೂರದ ಬೀಜಗಳು ಕಾರ್ಬೋಹೈಡ್ರೇಟ್ಗಳು, ಆಹಾರದ ಫೈಬರ್, ಕೊಬ್ಬು ಮತ್ತು ಪ್ರೋಟೀನ್ಗಳಿಂದ ತುಂಬಿದೆ. ಇದರ ಜೊತೆಗೆ ಖರ್ಜೂರದ ಬೀಜದ ಎಣ್ಣೆಯು ಉತ್ಕರ್ಷಣ ನಿರೋಧಕ ಅಂಶಗಳಿಂದ ಕೂಡಿದೆ. ಮುಖ್ಯವಾಗಿ ಖರ್ಜೂರದ ಬೀಜದ ಎಣ್ಣೆಯು ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ವಿಶೇಷವಾದ ಕೊಡುಗೆಗಳನ್ನು ನೀಡುತ್ತದೆ. ಖರ್ಜೂರದ ಬೀಜಗಳ ಪ್ರಯೋಜನದ ಬಗ್ಗೆ ಮಾಹಿತಿ ಇಲ್ಲಿದೆ ಓದಿ.
ಡಿ.ಎನ್.ಎ ಹಾನಿಯನ್ನು ತಡೆಯುತ್ತದೆ
ಅಧ್ಯಯನದ ಪ್ರಕಾರ, ಖರ್ಜೂರದ ಬೀಜಗಳು ರಾಸಾಯನಿಕವಾಗಿ ಪ್ರೇರಿತ ಪಿತ್ತಜನಕಾಂಗದ ಹಾನಿ ಮತ್ತು ಆಕ್ಸಿಡೇಟಿವ್ ಡಿ.ಎನ್.ಎ ಹಾನಿಯ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗೆಯೇ, ಖರ್ಜೂರದ ಬೀಜಗಳು ಪಿತ್ತಜನಕಾಂಗದ ಮಾದಕತೆಯ ವಿರುದ್ಧ ರಕ್ಷಣೆ ನೀಡುತ್ತದೆ.
ಮಧುಮೇಹಕ್ಕೆ ಬಹಳ ಒಳ್ಳೆಯದು
- ಖರ್ಜೂರದ ಬೀಜಗಳು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ.
- ಇದು ದೇಹದಲ್ಲಿರುವ ವಿಷತ್ವ ಅಥವಾ ಹಾನಿಯನ್ನು ತೆಗೆದು ಹಾಕುತ್ತದೆ. ಇ
- ಮೂತ್ರಪಿಂಡ ಮತ್ತು ಯಕೃತ್ತನ್ನು ತಡೆಯಲು ಉತ್ತೇಜಿಸುತ್ತದೆ.
- ಮಧುಮೇಹ ಹೊಂದಿರುವವರಿಗೆ ಬಹಳ ಉಪಯುಕ್ತವಾಗಿದೆ.
- ಖರ್ಜೂರದ ಬೀಜಗಳು ರಕ್ತದಲ್ಲಿನ ಸಕ್ಕರೆಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.
- ಕೆಲವು ಸಂಶೋಧನೆಗಳ ಪ್ರಕಾರ, ಯಕೃತ್ತು ಮತ್ತು ಮೂತ್ರಪಿಂಡಗಳ ಆರಂಭಿಕ ಮಧುಮೇಹವನ್ನು ಖರ್ಜೂರದ ಬೀಜವು ತಡೆಯುತ್ತದೆ.
ಸೋಂಕುಗಳ ವಿರುದ್ಧ ಹೋರಾಡುತ್ತದೆ
- ಖರ್ಜೂರದ ಬೀಜವು ಆಂಟಿ ವೈರಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
- ಇತ್ತೀಚೆಗೆ ಅನೇಕ ರೀತಿಯ ವೈರಲ್ ಸೋಂಕುಗಳು ಅಟ್ಯಾಕ್ ಮಾಡುತ್ತಿದೆ.
- ಇದು ವಿವಿಧ ರೋಗಕಾರಕ ವೈರಸ್ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ.
- ಸಂಶೋಧನೆಗಳ ಪ್ರಕಾರ, ಡೇಟ್ ಪಿಟ್ ಸಾರಗಳು ಸ್ಯೂಡೊಮೊನಾಸ್ ಫೇಜ್ ನಂತಹ ಸೋಂಕನ್ನು ತಡೆಗಟ್ಟುವ ಪ್ರಬಲ ಸಾಮರ್ಥ್ಯವನ್ನು ಹೊಂದಿದೆ.
ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿ
- ಖರ್ಜೂರದ ಬೀಜಗಳು ದೇಹದ ಮುಖ್ಯ ಅಂಗಾಂಗಗಳನ್ನು ಕೂಡ ರಕ್ಷಿಸುತ್ತದೆ.
- ಇವು ಪ್ರೋ ಆಂಥೋಸಯಾನಿಡಿನ್ಗಳಲ್ಲಿ ಸಮೃದ್ಧವಾಗಿವೆ. ಮುಖ್ಯವಾಗಿ ಇದು ಯಕೃತ್ತು ಮತ್ತು ಮೂತ್ರಪಿಂಡಗಳ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಅಧ್ಯಯನದ ಪ್ರಕಾರ, ಖರ್ಜೂರದ ಬೀಜದ ಸಾರವು ರಾಸಾಯನಿಕ ಪ್ರೇರಿತ ಮೂತ್ರಪಿಂಡ ಮತ್ತು ಯಕೃತ್ತಿನ ವಿಷತ್ವದಿಂದ ರಕ್ಷಿಸುತ್ತದೆ ಎಂದು ಹೇಳುತ್ತದೆ.
ಉತ್ಕರ್ಷಣ ನಿರೋಧಕಗಳು
- ಈಗಾಗಲೇ ತಿಳಿಸಿದಂತೆ ಖರ್ಜೂರದ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
- ಹಾಗೆಯೇ ಇದು ಸ್ವತಂತ್ರ ರಾಡಿಕಲ್ ಸ್ಕ್ಯಾವೆಂಜಿಂಗ್ ಸಾಮರ್ಥ್ಯವನ್ನು ಕೂಡ ಹೊಂದಿದೆ.
- ಸಂಶೋಧನೆಯ ಪ್ರಕಾರ, ಖರ್ಜೂರದ ಬೀಜದ ಪ್ರೋಟೀನ್ ಹೈಡ್ರೊಲೈಸೇಟ್ಗಳ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಆರೋಗ್ಯ ಮತ್ತು ಆಹಾರ ಘಟಕಾಂಶವಾಗಿ ಬಳಸಬಹುದು ಎನ್ನಲಾಗಿದೆ.
- ಮತ್ತೊಂದು ಸಂಶೋಧನೆಯು, ಖರ್ಜೂರದ ಬೀಜಗಳು ಬಲವಾದ ರಾಡಿಕಲ್ ಸ್ಕ್ಯಾವೆಂಜರ್ಗಳಾಗಿವೆ. ಇದು ಔಷಧೀಯ ಬಳಕೆಗಳಿಗಾಗಿ ನೈಸರ್ಗಿಕ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವೆಂದು ಪರಿಗಣಿಸಬಹುದಾಗಿದೆ.