ಬೆಂಗಳೂರು: ಹೆಲಿಕಾಪ್ಟರ್ನಲ್ಲಿ ಹೋಗಿ ಯಾವ ದಾಖಲೆ ತುಂಬಿಕೊಂಡು ಬಂದ್ರಿ. ರೀಡು ಹಗರಣ ಎಲ್ಲಿಗೆ ತಂದಿದ್ದೀರಿ, ಅದರ ಕಥೆ ಏನಾಯ್ತು. ಸಿಎಂಗೆ ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ. ರೆಡ್ ಕಾರ್ಪೆಟ್ ಹಾಕಿ 14 ಸೈಟ್ ನೀಡಿದ್ದಾರೆ, ತಪ್ಪೇ ಮಾಡಿಲ್ವಂತೆ ಹಾಗೆ ಹಗರಣ ನಡೆದಿಲ್ಲ ಅಂದರೆ ಅಧಿಕಾರಿಗಳನ್ನ ಇಟ್ಟು ಯಾಕೆ ತನಿಖೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Baby Hills: ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ಗೆ ತಾತ್ಕಾಲಿಕವಾಗಿ ಬ್ರೇಕ್!
ನಗರದ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಜನತೆ ಮೈತ್ರಿಯ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರಲ್ಲಿರುವ ಹುಮ್ಮಸ್ಸು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು..ನಾನು ಕೇಂದ್ರ ಸಚಿವನಾಗಿದ್ದೀನಿ,ಎರಡು ಇಲಾಖೆ ಕೊಟ್ಟಿದ್ದಾರೆ
ಪಕ್ಷ ಸಂಘಟನೆಗೆ ನನ್ನ ಅನುಪಸ್ಥಿತಿ ತುಂಬಲು ನಮ್ಮ ಪಕ್ಷದ ಎಲ್ಲಾ ಮುಖಂಡರು ಸಾಮೂಹಿಕ ನಾಯಕತ್ವದ ಜವಾಬ್ದಾರಿ ಹೊರಬೇಕು ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಹೆಚ್ಚಿನ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಲ್ಲರ ಜೊತೆ ವಿಶ್ವಾಸದಲ್ಲಿ ಪಾಲ್ಗೊಳ್ಳಬೇಕು ಅನ್ನೋ ಸಲಹೆ ಕೊಟ್ಟಿದ್ದಾರೆ..ಪಕ್ಷದ ನಾಯಕರ ಜೊತೆಗೂಡಿ ಕೆಲಸ ಮಾಡೋ ನಿರ್ಧಾರ ಮಾಡಿದ್ದಾರೆ
ಈಗಿನ ಸರ್ಕಾರದಲ್ಲಿ ಜನ ವಿರೋಧಿ ನೀತಿ ನಡಿತಿಗೆ ಹಾಲಿನ ದರ ಏರಿಕೆಯಾಗಿದೆ, ಅದಕ್ಕೂ ಸಬೂಬು ಹೇಳ್ತಿದ್ದಾರೆ
ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ ರೈತರ ಹನಿ ನೀರಾವರಿ ಸಬ್ಸಿಡಿ ಏನಿತ್ತು ಅದನ್ನು 18% ಗೆ ಇಳಿಸೋ ಕೆಲಸ ಮಾಡಿದೆ ರೈತರಿಗೆ ಕನಿಷ್ಠ 50% ಏರಿಕೆ ಮಾಡಿದ್ದಾರೆ..ಹೊಸ ಟಿಸಿ ಪಡೆಯಲು ಅರ್ಜಿ ಹಾಕಿದ್ರೆ ಸುಮಾರು 2.5 ಲಕ್ಷ ರೈತ ಗ್ಯಾರಂಟಿ ಹೆಸರಲ್ಲಿ ಎಲ್ಲರ ಮೇಲೂ ತೆರಿಗೆ ಬಾರ ಹೊರಿಸ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.