ಲಂಡನ್: ಬ್ರಿಟನ್ ಸಂಸತ್ ಚುನಾವಣೆಯಲ್ಲಿ (UK Elections 2024) ಕನ್ಸರ್ವೇಟಿವ್ ಪಕ್ಷಕ್ಕೆ (Conservative Party) ಹೀನಾಯ ಸೋಲಾದ ಬೆನ್ನಲ್ಲೇ ಪ್ರಧಾನಿ ರಿಷಿ ಸುನಾಕ್ (Rishi Sunak) ಕ್ಷಮೆ ಕೇಳಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ (Keir Starmer) ನೇತೃತ್ವದ ಲೇಬರ್ ಪಕ್ಷವು (Labour Party) ಒಟ್ಟು 650 ಸ್ಥಾನಗಳಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ನಂತರ ಕ್ಷಮೆಯಾಚಿಸಿದ ರಿಷಿ ಸುನಕ್ ಸೋಲನ್ನು ಒಪ್ಪಿಕೊಂಡರು. ಪಕ್ಷದ ಸೋಲಿಗೆ ಕ್ಷಮೆ ಕೇಳಿದ ಅವರು ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
https://ainlivenews.com/rishi-sunak-resigned-from-the-post-of-prime-minister-after-losing-the-election/
ಈ ವೇಳೆ ಸುನಕ್ ಪತ್ನಿ ಅಕ್ಷತಾ ಮೂರ್ತಿ ಭಾಗಿಯಾಗಿದ್ದರು, ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ರಿಷಿ ಸುನಕ್ ಭಾಷಣದ ವೇಳೆ ಅಕ್ಷತಾ ಮೂರ್ತಿ ತಮ್ಮ ಪತಿಯ ಹಿಂದೆ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬ್ಲ್ಯೂ, ವೈಟ್ ಮತ್ತು ರೆಡ್ ಪ್ಯಾಟರ್ನ್ ಡ್ರೆಸ್ ಅನ್ನು ಅಕ್ಷತಾ ಧರಿಸಿದ್ದರು. ಜೊತೆಗೆ ಒಂದು ಛತ್ರಿಯನ್ನು ಹಿಡಿದುಕೊಂಡು ತುಂಬಾ ಗಂಭೀರವಾಗಿ ನಿಂತಿದ್ದರು. ಅವರು ಧರಿಸಿದ್ದ ಡ್ರೆಸ್ ನೋಡಿದ ನೆಟ್ಟಿಗರು, ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಕೆಲವರು ಅವರು ಧರಿಸಿದ್ದ ಬಟ್ಟೆಯ ಬಣ್ಣಗಳ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಡ್ರೆಸ್ನ ಮಾದರಿಯ ಬಗ್ಗೆ ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಅವರ ಡ್ರೆಸ್ ಸೆನ್ಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ನ ಬೆಲೆ 42 ಸಾವಿರ ರೂಪಾಯಿ ಆಗಿದೆ ಎಂದು ವರದಿಯಾಗಿದೆ