ನಾವು ಹೇಳುತ್ತಿರುವುದು ನೀವು ಒಂದು ಕ್ಷಣ ನಂಬಲ್ಲ ಆದ್ರೆ ಇದು ಸತ್ಯ. ಎಸ್, ವೀಕ್ಷಕರೇ ಬೀಚ್ಗಳು ಎಲ್ಲಾ ದೇಶಗಳಲ್ಲಿ ಒಂದೇ ರೀತಿ ಇರುವುದಿಲ್ಲ.
ರೌಡಿಶೀಟರ್ಗಳ ಫ್ಯಾನ್ ಪೇಜ್ ಗಳ ಮೇಲೆ CCB ಕಣ್ಣು: N Boss, C Boss ಎಂಬ ಬಿಲ್ಡಪ್ ಗೆ ಬೀಳುತ್ತಾ ಬ್ರೇಕ್!
ಪ್ರವಾಸಿಗರು ಬೆತ್ತಲೆಯಾಗಿ ಅಡ್ಡಾಡುವುದಕ್ಕೆ ದೇಶದಲ್ಲಿ ಕೆಲವು ಬೀಚ್ಗಳಿವೆ. ಇಲ್ಲಿ ಗಂಡಸರು, ಹೆಂಗಸರು ಎಲ್ಲ ಬಟ್ಟೆ ಇಲ್ಲದೇ ಬೆತ್ತಲೆಯಾಗಿ ಓಡಾಡುತ್ತಾರೆ. ಇದಕ್ಕೆ ಕಾರಣ ಏನು? ಈ ಕಡಲತೀರಗಳು ಎಲ್ಲಿವೆ ಎಂದು ನಾವಿಂದು ತಿಳಿಯೋಣ.
ಸಮುದ್ರದ ತೀರದಲ್ಲಿ ಬೆತ್ತಲೆಯಾಗಿರುವುದಕ್ಕೆ ‘ಸನ್ ಬಾತ್’ ಎನ್ನುತ್ತಾರೆ. ಅಂದರೆ ಬಿಸಿಲಿನಲ್ಲಿ ಬೀಚ್ ಮರಳಿನಲ್ಲಿ ಬೆತ್ತಲೆಯಾಗಿ ಮಲಗಿರುವುದು ಅಥವಾ ಬಟ್ಟೆ ಧರಿಸದೇ ಇದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಜನ ಮುಕ್ತವಾಗಿ ತಿರುಗಾಡುತ್ತಾರೆ. ಸನ್ ಬಾತ್ ಮಾಡುವುದರಿಂದ ಸೂರ್ಯನ ಬೆಳಕಿನಿಂದ ನೇರವಾಗಿ ವಿಟಮಿನ್ ಡಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಕ್ರೊಯೇಷಿಯಾದ ವಲಲ್ಟಾ ಬೀಚ್ ತುಂಬಾ ಸುಂದರವಾಗಿದೆ. ಇಲ್ಲಿನ ಮರಳಿನಲ್ಲಿ ಹೆಚ್ಚು ಬೆಣಚುಕಲ್ಲುಗಳಿವೆ. ಈ ಬೆಣಚುಕಲ್ಲುಗಳು ಚಿನ್ನದ ಬಣ್ಣದಲ್ಲಿದ್ದು, ಬಿಸಿಲಿನಲ್ಲಿ ಕಂಡರೆ ಅಲ್ಲಲ್ಲಿ ಚಿನ್ನದಂತೆ ಹೊಳೆಯುತ್ತವೆ. ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮತ್ತು ಬೆತ್ತಲೆಯಾಗಿ ಸಮುದ್ರದಲ್ಲಿ ಮೋಜು ಮಾಡಲು ಯುರೋಪ್ ಮಾತ್ರವಲ್ಲದೇ ವಿಶ್ವದ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ
ಪ್ರಪಂಚದ ಅನೇಕ ದೇಶಗಳು ನಗ್ನ ಕಡಲತೀರಗಳನ್ನು ಹೊಂದಿವೆ. ಅನೇಕ ಪ್ರವಾಸಿಗರು ಸಹ ಅಲ್ಲಿಗೆ ಭೇಟಿ ನೀಡುತ್ತಾರೆ. ಬಟ್ಟೆ ಧರಿಸದೇಮ, ಬೆತ್ತಲೆ ದೇಹದಿಂದ ಪ್ರಕೃತಿಯ ನೋಟವನ್ನು ಆನಂದಿಸುತ್ತಾರೆ. ಅಂತಹ ಒಂದು ಬೀಚ್ ಫ್ರಾನ್ಸ್ನ ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಸಮೀಪವಿರುವ ಈ ಕಡಲತೀರದಲ್ಲಿ ನಗ್ನತೆಯಿಂದ ಇರಲು ಯಾವುದು ಅಡ್ಡಿಯಿಲ್ಲ. ಯಾರು ಬೇಕಾದರೂ ನಗ್ನರಾಗಿ ಓಡಾಡಬಹುದು
ಡೆನ್ಮಾರ್ಕ್ನ ಬೆಲ್ಲೆವ್ಯೂ ಬೀಚ್ ವಿಶ್ವದ ಅತ್ಯಂತ ಪ್ರಸಿದ್ಧ ನ್ಯೂಡ್ ಬೀಚ್ಗಳಲ್ಲಿ ಒಂದಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೇ ಈ ಕಡಲತೀರದಲ್ಲಿ ಯಾರೊಬ್ಬರೂ ಇತರರ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಆದ್ದರಿಂದ ಇದು ಸುರಕ್ಷಿತ ತಾಣವಾಗಿದೆ.
ಇಟಲಿಯು ಅನೇಕ ಕಡಲತೀರಗಳನ್ನು ಹೊಂದಿದೆ. ಆದರೆ ಕಾರ್ನಿಗ್ಲಿಯಾ ಬೀಚ್ ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಏಕೆಂದರೆ ಇದು ಇಟಲಿಯ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ನಗ್ನ ಬೀಚ್ ಆಗಿದೆ. ಈ ಕಡಲತೀರವನ್ನು ತಲುಪಲು ನೀವು ಸುರಂಗದ ಮೂಲಕ ಹೋಗಬೇಕು.