ಕೆಲವರಿಗೆ ಹೊರಗಡೆ ತಿನ್ನುವುದು ಅನಿವಾರ್ಯ ವಾಗಿರುವುದು. ಅದರಲ್ಲೂ ಅವಿವಾಹಿತರು, ಉದ್ಯೋಗದಿಂದ ಬೇರೆ ಕಡೆ ವಾಸ ಮಾಡುವವರಿಗೆ ಇದು ಒಂದು ರೀತಿಯಲ್ಲಿ ಅನಿವಾರ್ಯವಾಗಿದೆ. ಆದರೆ ಕೆಲವು ಆಹಾರಗಳು ನಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕವನ್ನು ಉಂಟು ಮಾಡಬಹುದು. ಅಂತಹ ಆಹಾರಗಳಿಂದ ದೂರವಿರುವುದು ಒಳಿತು.
Tungabhadra Reservoir: ಮಲೆನಾಡಿನ ಮಳೆಯಿಂದ ತುಂಗಭದ್ರಾಗೆ ಬಂತು ಜೀವಕಳೆ! ಒಳಹರಿವು ಹೆಚ್ಚಳ
ಡಬ್ಬಗಳಲ್ಲಿ(ಕ್ಯಾನ್) ಪ್ಯಾಕ್ ಮಾಡಲ್ಪಟ್ಟಿರುವಂತಹ ಆಹಾರದಲ್ಲಿ ಬಿಸ್ಫೆನಾಲ್-ಎ(ಬಿಪಿಎ) ಎನ್ನುವ ಅಂಶವಿರುವುದು. ಇದನ್ನು ಕ್ಯಾನ್ ನ ಪದರ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಬಿಪಿಎಯಿಂದಾಗಿ ವಿವಿಧ ಬಗೆಯ ಕ್ಯಾನ್ಸರ್ ಬರುವುದು. ಅದರಲ್ಲೂ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದು.
ಅಧಿಕ ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟ್ ಪಾನೀಯ ಗಳು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿ ಸುವುದು. ಈ ಪಾನೀಯಗಳಲ್ಲಿ ಬಣ್ಣಕ್ಕಾಗಿ ಬಳಕೆ ಮಾಡುವ ಕ್ಯಾರಮೆಲ್ ನಲ್ಲಿ ೪-ಎಂಇಐ ಎನ್ನುವ ಕ್ಯಾನ್ಸರ್ ಕಾರಕ ಅಂಶವಿದೆ.
ಸಂಸ್ಕರಿಸಿದ ಆಹಾರಗಳು ಹೆಚ್ಚು ಬಾಳಿಕೆ ಬರಲು ಹೈಡ್ರೋಜ ನೀಕರಿಸಿದ ತೈಲಗಳನ್ನು ಬಳಕೆ ಮಾಡಲಾಗುತ್ತದೆ. ಈ ತೈಲಗಳು ಫ್ರೀ ರ್ಯಾರಿಕಲ್ ನ್ನು ಬಿಡುಗಡೆ ಮಾಡುವುದು.
ಇದರಿಂದ ಜೀವಕೋಶಗಳಿಗೆ ಹಾನಿಯಾಗುವುದು ಮತ್ತು ಕ್ಯಾನ್ಸರ್ ಬರಬಹುದು. ಇವು ಟ್ರಾನ್ಸ್ ಫ್ಯಾಟ್ ನ್ನು ಹೆಚ್ಚಿಸಿ, ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು
ಮೈಕ್ರೋವೇವ್ ಪಾಪ್ ಕಾರ್ನ್ ನ ಬ್ಯಾಗ್ ನಲ್ಲಿ ಪರ್ಫ್ಲೋರೊಕ್ಟಾ ನೋಯಿಕ್ ಆಮ್ಲ(ಪಿಎಫ್ಒಎ) ಇದ್ದು, ಇದು ಕ್ಯಾನ್ಸರ್ ಕಾರಕ ವಾಗಿದೆ. ಅದೇ ರೀತಿಯಾಗಿ ಕೃತಕ ಬೆಣ್ಣೆ ರುಚಿ ನೀಡಲು ಡಯಾಸೆಟೈಲ್ ನ್ನು ಬಳಕೆ ಮಾಡಲಾಗುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುವುದು.
ಅಧಿಕ ಫ್ರಾಕ್ಟೋಸ್ ಇರುವ ಕಾರ್ನ್ ಸಿರಪ್ ಮತ್ತು ಇತರ ರಿಫೈನ್ಡ್ ಸಕ್ಕರೆಯು ಇನ್ಸುಲಿನ್ ಮಟ್ಟ ಹೆಚ್ಚಿಸಿ, ಕ್ಯಾನ್ಸರ್ ಕಾರಕ ಕೋಶಗಳು ಬೆಳವಣಿಗೆಗೆ ನೆರವಾಗುವುದು. ಇವೆಲ್ಲವೂ ಕೊಲೊರೆಕ್ಟಲ್ ಕ್ಯಾನ್ಸರ್ ಗೆ ಕಾರಣವಾಗಬಲ್ಲದು.
ಸಾಸೇಜ್, ಬಕಾನ್ ಮತ್ತು ಡೆಲಿ ಮಾಂಸದಲ್ಲಿ ಸಂರಕ್ಷಣೆಗಾಗಿ ನೈಟ್ರೇಟ್ ಮತ್ತು ನೈಟ್ರೈಟ್ ಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ನೈಟ್ರೋಸಮೈನ್ ಗಳನ್ನು ಉಂಟು ಮಾಡಬಹುದು. ಇದು ಕ್ಯಾನ್ಸರ್ ಕಾರಕವಾಗಬಲ್ಲದು.
ಕೆಂಪು ಮಾಂಸ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಗೆ ಕಾರಣವಾ ಗಬಲ್ಲದು. ಅಧಿಕ ತಾಪಮಾನದಲ್ಲಿ ಇದನ್ನು ಬೇಯಿಸಿದ ವೇಳೆ ಕೆಂಪು ಮಾಂಸವು ಹೆಟೆರೋಸೈಕ್ಲಿಕ್ ಅಮೈನ್ ಗಳು(ಎಚ್ ಸಿಎ) ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು ಉಂಟು ಮಾಡುವುದು. ಇವು ಕ್ಯಾನ್ಸರ್ ಕಾರಕವಾಗಿದೆ
ಅಧಿಕ ಸೋಡಿಯಂ ಹೊಂದಿರುವ ಉಪ್ಪಿನಕಾಯಿಯು ಹೊಟ್ಟೆಯ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು. ಇದರಲ್ಲಿ ಇರುವ ಅಧಿಕ ಉಪ್ಪಿನಾಂಶವು ಹೊಟ್ಟೆಯ ಪದರಕ್ಕೆ ಹಾನಿ ಉಂಟು ಮಾಡಬಹುದು ಮತ್ತು ಹೆಲಿಕೋಬ್ಯಾಕ್ಟರ್ ಪೈಲೋರಿ ಎನ್ನುವ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇದು ಕ್ಯಾನ್ಸರ್ ಉಂಟು ಮಾಡ ಬಹುದು.
ಹೆಚ್ಚಾಗಿ ಏಶ್ಯಾದ ಕೆಲವು ರಾಷ್ಟ್ರಗಳಲ್ಲಿ ಉಪ್ಪಿನ ಮೀನನ್ನು ಬಳಕೆ ಮಾಡುವರು. ಇದರಲ್ಲಿ ನೈಟ್ರೋಸಮೈನ್ ಗಳು ಇದ್ದು, ಕ್ಯಾನ್ಸರ್ ಕಾರಕವಾಗಿರುವ ಇದು ನಾಸೊಫಾರ್ಂಜಿಯಲ್ ಕ್ಯಾನ್ಸರ್ ಉಂಟು ಮಾಡಬಹುದು.