ಬಳ್ಳಾರಿ: ಮಲೆನಾಡಿನಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು, ಮೂರೇ ದಿನಗಳ ಅಂತರದಲ್ಲಿ ಜಲಾಶಯಕ್ಕೆ 4ಕ್ಕೂ ಅಧಿಕ ಟಿಎಂಸಿ ನೀರು ಸಂಗ್ರಹವಾಗಿದೆ.
ಇದರಿಂದ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಮರುಜೀವ ಬಂದಂತಾಗಿದೆ. ಗುರುವಾರ (ಜು.4) 10.082 ಟಿಎಂಸಿ ನಷ್ಟಿದ್ದ ಜಲಾಶಯದ ನೀರಿನ ಮಟ್ಟ ಶುಕ್ರವಾರ 11.714 ಟಿಎಂಸಿಗೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಟಿಬಿ ಡ್ಯಾಂಗೆ 1.5 ಟಿಎಂಸಿ (TMC) ನೀರು ಹರಿದುಬಂದಿದೆ.
ಪ್ರತಿದಿನ ಕ್ಯಾರೆಟ್ ಸೇವಿಸುವುದು ದೃಷ್ಟಿಗೆ ಮಾತ್ರವಲ್ಲ, ಬಿಪಿ, ಹೃದ್ರೋಗಕ್ಕೂ ಒಳ್ಳೆಯದು..!
ಸದ್ಯ ಜಲಾಶಯಕ್ಕೆ 19,200ಕ್ಕೂ ಅಧಿಕ ಕ್ಯೂಸೆಕ್ ನೀರು ಒಳಹರಿವು ಇದ್ದು, ಕಳೆದ ಒಂದು ವಾರದಿಂದ ಸರಾಸರಿ ಒಳಹರಿವಿನ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ 11.714 ಟಿಎಂಸಿ ನೀರು ಸಂಗ್ರಹವಾಗಿದೆ.