ನವದೆಹಲಿ: ಅನಂತ್ ಅಂಬಾನಿ- ರಾಧಿಕಾ ಮಹೋತ್ಸವದಲ್ಲಿ ಇದೀಗ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಅವರು ಭಾಗವಹಿಸುತ್ತಿದ್ದು ಕಲಾ ಪ್ರದರ್ಶನ ನೀಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಅವರು ಮುಂಬಯಿ ತಲುಪಿದ್ದಾರೆ. ಜಸ್ಟಿನ್ ಬೈಬರ್ ಪ್ರದರ್ಶನಕ್ಕಾಗಿ ಅಂಬಾನಿ ಕುಟುಂಬ ಅವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್(83.5 ಕೋಟಿ ರೂಪಾಯಿ) ಸಂಭಾವನೆ ನೀಡುತ್ತಿದೆ ಎಂದು ತಿಳಿದು ಬಂದಿದೆ.
ಪೋರ್ಚುಗಲ್ ವೆಬ್ ಸೈಟ್ ಲಿಯೋ ಡಯಾಸ್ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಆದರೆ ಅಂಬಾನಿ ಕುಟುಂಬವಾಗಲಿ ಅಥವಾ ಜಸ್ಟಿನ್ ಬೈಬರ್ ಅವರಾಗಲಿ ಈ ವಿಚಾರದ ಬಗ್ಗೆ ಮಾತನಾಡಿಲ್ಲ. ಜಸ್ವಿನ್ ಅವರು ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಆ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇಂದು ನಡೆಯಲಿರುವ ಸಂಗೀತ್ ಕಾರ್ಯಕ್ರಮದಲ್ಲಿ ಅವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
https://ainlivenews.com/do-you-eat-after-9-pm-all-these-problems-are-guaranteed-to-occur/
ವಿದೇಶಿ ಕಲಾವಿದರಾದ ಅಡೇಲ್, ಡ್ರೇಕ್ ಮತ್ತು ಲಾನಾ ಡೆಲ್ ರೇ ಈವರೆಗೂ ಅಂಬಾನಿ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿತ್ತು.ಇದೀಗ ಜಸ್ಟಿನ್ ಬೈಬರ್ ಹೆಸರು ಹೊಸ ಸೇರ್ಪಡೆಯಾಗಿದೆ. ಅನಂತ್ ಮತ್ತು ರಾಧಿಕಾ ಅವರು ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ(BKC) ಜಿಯೋ ವರ್ಲ್ಡ್ ಕನ್ವೆನ್ಶನ್ ೆಂಟರ್ ನಲ್ಲಿ ಜುಲೈ 12ರಂದು ನಡೆಯುವ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ.