ಸ್ಮಾರ್ಟ್ಫೋನ್ ಪ್ರಿಯರ ಅತಿ ನೆಚ್ಚಿನ ಇನ್ಸ್ಟಾಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಸೆಕ್ಯೂರಿಟಿ ಫೀಚರ್ಗಳನ್ನು ದಿನೇ ದಿನೇ ಅತಿಹೆಚ್ಚು ಬಲಪಡಿಸುತ್ತಿದೆ. ಈಗ ಮತ್ತೊಂದು ಅತ್ಯಾಧುನಿಕ ಸೆಕ್ಯೂರಿಟಿ ಫೀಚರ್ ಅನ್ನು ಅಭಿವೃದ್ಧಿಪಡಿಸಿದೆ.
ಮೆಟಾ ಕಂಪನಿ ಈ ಫೀಚರ್ ಮೇಲೆ 2024 ರ ಜನವರಿ ತಿಂಗಳಲ್ಲಿ ಕಾರ್ಯ ಆರಂಭಿಸಿತು. ನಂತರದ ಮೂರು ತಿಂಗಳು ಬೆಟಾ ಟೆಸ್ಟಿಂಗ್ ಮಾಡುವ ಮೂಲಕ, ಈಗ ವಾಟ್ಸಾಪ್ ಬಳಕೆದಾರರಿಗೆ ಜಗತ್ತಿನಾದ್ಯಂತ ಲಭ್ಯಗೊಳಿಸಿದೆ.
ನೀವೇನಾದರೂ ಕಡಿಮೆ ಬೆಲೆಗೆ ಉತ್ತಮ ಕಾರನ್ನೇನಾದರೂ ಖರೀದಿಸಬೇಕೇ: ಇಲ್ಲಿದೆ ನೋಡಿ!
ಅಂದಹಾಗೆ ಪಾಸ್ಕೀ ಸಪೋರ್ಟ್ ಫೀಚರ್ ಅನ್ನು ಪ್ರಸ್ತುತ ಲಭ್ಯಗೊಳಿಸಿರುವುದು ಐಓಎಸ್ ಬಳಕೆದಾರರಿಗೆ. ಅಂದರೆ ಐಫೋನ್ ಬಳಕೆದಾರರಿಗೆ. ಇದಕ್ಕೂ ಮೊದಲೇ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರಿಗೆ ಈ ಫೀಚರ್ ಅಳವಡಿಸಿದೆ.
ವಾಟ್ಸಾಪ್ ಯಾವ ಐಓಎಸ್ ವರ್ಷನ್ನಲ್ಲಿ ಈ ಫೀಚರ್ ಲಭ್ಯ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಈ ಹಿಂದಿನ ಒಂದು ವರದಿ ಪ್ರಕಾರ ಐಓಎಸ್ 17 ಮತ್ತು ನಂತರದ ವರ್ಷನ್ಗಳಲ್ಲಿ ಪಾಸ್ಕೀ ಸಪೋರ್ಟ್ ವರ್ಕ್ ಆಗಲಿದೆ ಎಂದು ಹೇಳಲಾಗಿದೆ. ಅಂದರೆ ಐಫೋನ್ XR ಮಾಡೆಲ್ಗಳು ಅಥವಾ ಹೊಸ ಐಓಎಸ್ ಡಿವೈಸ್ಗಳನ್ನು ಈ ಪಾಸ್ಕೀ ಸೆಟಪ್ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ವಾಟ್ಸಾಪ್ ಪಾಸ್ಕೀ ಅನ್ನು ಸೆಟ್ ಮಾಡುವುದು ಹೇಗೆ?
– ನಿಮ್ಮ ಐಓಎಸ್ ಡಿವೈಸ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಓಪನ್ ಮಾಡಿ.
– ಸೆಟ್ಟಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
– ‘Accounts’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
– ‘Passkeys’ ಆಯ್ಕೆ 4ನೇ ಆಪ್ಸನ್ ಆಗಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
– ಮುಂದಿನ ಸ್ಕ್ರೀನ್ನಲ್ಲಿ ‘Create Passkey’ ಬಟನ್ ಕ್ಲಿಕ್ ಮಾಡಿ.
– ನಂತರ ನೀವು Face ID ಅಥವಾ Touch ID ಆಯ್ಕೆಗಳನ್ನು ನೋಡುತ್ತೀರಿ. ಆಯ್ಕೆ ಮಾಡಿ ‘Continue’ ಎಂಬಲ್ಲಿ ಕ್ಲಿಕ್ ಮಾಡಿ.