ಶಿರಾ:- ಶಿರಾ ತಾಲೂಕಿನ ಸೀಬಿ ಅರಣ್ಯ ಪ್ರದೇಶ ಸಮೀಪದ ಶಿರಾ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ತಾಲೂಕಿನ ಚಿಕ್ಕ ಸೀಬಿ ಗ್ರಾಮದ ಲಿಂಗರಾಜ್ (20) ಮೃತ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ಇದ್ದ ಸಿದ್ದಲಿಂಗಪ್ಪ (50) ಅಪಘಾತದಲ್ಲಿ ಮೃತಪಟ್ಟವರು. ಗುರುವಾರ ಮಧ್ಯಾಹ್ನ ತಮ್ಮ ಸ್ವಗ್ರಾಮ ಚಿಕ್ಕ ಸೀಬಿಯಿಂದ ದೊಡ್ಡ ಅಲದ ಮರದ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ
ತುಮಕೂರು ಕಡೆಯಿಂದ ಶಿರಾ ಕಡೆಗೆ ತೆರಳುತ್ತಿದ್ದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಲಾರಿಯ ಚಕ್ರ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ
ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಶಿರಾ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ