ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಂಡರೆ ಶೀಘ್ರ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.
ಮಧುಮೇಹಗಳೇ ಗಮನಿಸಿ: ಆಹಾರದ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ!
ಕ್ಯಾಲೋರಿಗಳನ್ನು ಕಡಿಮೆ ಮಾಡಲು ಮತ್ತು ಪೋಷಣೆಯನ್ನು ಹೆಚ್ಚಿಸಲು ಸರಳವಾದ ಆದರೆ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪ್ರತಿ ಊಟದಲ್ಲಿ ನಿಮ್ಮ ಪ್ಲೇಟ್ನಲ್ಲಿ ಅರ್ಧದಷ್ಟು ಭಾಗ ತರಕಾರಿಗಳನ್ನು ತುಂಬಿಸಿಕೊಳ್ಳುವುದು.
ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರರ್ಥ ಕ್ಯಾಲೋರಿಗಳನ್ನು ಓವರ್ಲೋಡ್ ಮಾಡದೆಯೇ ಅವು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತವೆ.
ಕಡಿಮೆ ಕ್ಯಾಲೋರಿ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವವರು ಒಟ್ಟಾರೆಯಾಗಿ ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತಾರೆ.
ತರಕಾರಿಗಳಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಹೆಚ್ಚು ಕಾಲ ತೃಪ್ತಿ ಪಡಿಸುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡುವುದು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆಯ ಮೂಲಾಧಾರವಾಗಿದೆ. ಆದಾಗ್ಯೂ, ನಿಮ್ಮ ಜೀವನಶೈಲಿ ಮತ್ತು ಆಸಕ್ತಿಗಳಿಗೆ ಸರಿ ಹೊಂದುವ ವ್ಯಾಯಾಮವನ್ನು ಆಯ್ಕೆ ಮಾಡುವುದು ತುಂಬಾನೇ ಅತ್ಯಗತ್ಯವಾಗುತ್ತದೆ
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್’ ನಲ್ಲಿನ ಅಧ್ಯಯನವು ತೂಕ ನಷ್ಟ ಮತ್ತು ಸ್ನಾಯು ಸಂರಕ್ಷಣೆಗೆ ಪ್ರತಿರೋಧ ತರಬೇತಿಯೊಂದಿಗೆ ಏರೋಬಿಕ್ ವ್ಯಾಯಾಮವನ್ನು ಸಂಯೋಜಿಸುವುದು ವಿಶೇಷವಾಗಿ ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತದೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳೊಂದಿಗೆ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಹುರುಪಿನ ಚಟುವಟಿಕೆಯನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.
ಊಟಕ್ಕೆ ಮೊದಲು ನೀರು ಕುಡಿಯಿರಿ
ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದು ಪರಿಣಾಮಕಾರಿ ತೂಕ ಕಡಿಮೆ ಮಾಡಿಕೊಳ್ಳುವ ತಂತ್ರವಾಗಿದೆ. ನೀರು ನೀವು ಸದಾ ಕಾಲ ಹೈಡ್ರೇಟ್ ಆಗಿ ಉಳಿಯಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
‘ಒಬೆಸಿಟಿ’ ಜರ್ನಲ್ನಲ್ಲಿನ ಅಧ್ಯಯನವು ಊಟಕ್ಕೆ ಮುಂಚಿತವಾಗಿ 500 ಮಿಲಿ ಲೀಟರ್ ನೀರನ್ನು ಸೇವಿಸಿದ ಜನರು ನೀರನ್ನು ಕುಡಿಯದೆ ಹಾಗೆಯೇ ಊಟಕ್ಕೆ ಕೂತ ಜನರಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಕಂಡು ಹಿಡಿದಿದೆ. ನಿಮ್ಮ ಊಟಕ್ಕೂ 30 ನಿಮಿಷಗಳ ಮುಂಚೆ ಒಂದು ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆಹಾರ ಜರ್ನಲ್ ಅನ್ನು ಇರಿಸಿಕೊಳ್ಳಿ
ಆಹಾರದ ಜರ್ನಲ್ ಅನ್ನು ಇಟ್ಟುಕೊಳ್ಳುವುದು ನಿಮ್ಮ ಆಹಾರ ಪದ್ಧತಿಯನ್ನು ಕ್ರಮಬದ್ದವಾಗಿಸುತ್ತದೆ. ನೀವು ಪ್ರತಿ ದಿನ ಏನು ತಿನ್ನುತ್ತಿದ್ದೀರಿ ಮತ್ತು ಕುಡಿಯುತ್ತೀರಿ ಎಂಬುದನ್ನು ಟ್ರ್ಯಾಕ್ ಮಾಡುವುದರಿಂದ ಹಿಡಿದು ಸುಧಾರಣೆಯಾಗಬೇಕಾದ ವಿವರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
‘ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್’ ನಲ್ಲಿನ ಅಧ್ಯಯನದ ಪ್ರಕಾರ, ವಾರದಲ್ಲಿ ಆರು ದಿನ ಆಹಾರ ಡೈರಿಯನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಮಾಡದವರಿಗಿಂತ ಎರಡು ಪಟ್ಟು ಹೆಚ್ಚು ತೂಕವನ್ನು ಕಳೆದುಕೊಳ್ಳುತ್ತಾರೆ.
ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದರಿಂದ ಚಯಾಪಚಯವನ್ನು ಹೆಚ್ಚಿಸುವ ಮೂಲಕ, ಹಸಿವನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಸಂರಕ್ಷಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು.
‘ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್’ ನಲ್ಲಿನ ಅಧ್ಯಯನವು ಹೆಚ್ಚಿನ ಪ್ರೋಟೀನ್ ಸೇವನೆಯು ಹೆಚ್ಚಿನ ತೂಕ ನಷ್ಟ ಮತ್ತು ಕೊಬ್ಬಿನ ದ್ರವ್ಯರಾಶಿಯ ನಷ್ಟಕ್ಕೆ ಕಾರಣವಾಗಬಹುದು ಎಂದು ವರದಿ ಮಾಡಿದೆ. ಮೊಟ್ಟೆ, ಡೈರಿ ಉತ್ಪನ್ನಗಳು, ಕಾಳುಗಳು ಮತ್ತು ಬೀಜಗಳಂತಹ ಪ್ರೋಟೀನ್-ಭರಿತ ಆಹಾರಗಳನ್ನು ನಿಮ್ಮ ಊಟಕ್ಕೆ ಸೇರಿಸಿಕೊಳ್ಳಿ.
ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ದೇಹದ ತೂಕವನ್ನು ಕಳೆದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಸೂರ್ಯ ನಮಸ್ಕಾರದಂತಹ ಯೋಗ ಭಂಗಿ ಸಮಗ್ರ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ, ಇದು ಸ್ನಾಯುಗಳನ್ನು ಬಲಪಡಿಸುತ್ತವೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತವೆ.
ಪರಿವೃತ್ತ ಉತ್ಕಟಾಸನ ದೇಹವನ್ನು ನಿರ್ವಿಷಗೊಳಿಸಲು, ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಮತ್ತು ಸೊಂಟದ ಸುತ್ತಳತೆಯನ್ನು ಟ್ರಿಮ್ ಅಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ