ಬೆಂಗಳೂರು:- ಡೆಂಗ್ಯೂ ಜತೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರಿ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿ.ಸಿ, ಸಿಇಒ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಡೆಂಗ್ಯೂ ಹಾಟ್ ಸ್ಪಾಟ್ಗಳನ್ನ ಪತ್ತೆ ಹಚ್ಚಿ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿದರು
ನಿಮ್ಮ ಮನೆಯಲ್ಲಿ ಹೆಚ್ಚೆಚ್ಚು ಹಲ್ಲಿ ಇವೆಯಾ!?- ಹಾಗಿದ್ರೆ ಇದು ಒಳ್ಳೆಯದೇ? ಕೆಟ್ಟದ್ದೇ?
ಎಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತವೆಯೋ ಅಂತಹ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರಯಲು ಸಲಹೆ ನೀಡಿದರು. ಇಂಥಹ ಪ್ರದೇಶಗಳಲ್ಲಿ ಯಾರಿಗೆ ಜ್ವರ ಕಂಡುಬಂದರು, ಕಡ್ಡಾಯವಾಗಿ ಡೆಂಗ್ಯೂ ಟೆಸ್ಟಿಂಗ್ ಗೆ ಒಳಪಡಿಸಿ. ಆರಂಭದಲ್ಲೇ ಡೆಂಗ್ಯೂ ಪತ್ತೆ ಆದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ವಿಳಂಭವಾದಾಗ ಸಾವುಗಳು ಸಂಭವಿಸುತ್ತವೆ. ಡೆಂಗ್ಯೂಯಿಂದ ಇದರಿಂದ ಡೆಂಗ್ಯೂಯಿಂದಾಗುವ ಸಾವುಗಳಾಗಬಾರದು. ಸಾವುಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ಮಾಡಬೇಕು. ಮೆಡಿಕಲ್ ಆಫಿಸರ್ಸ್ ಸ್ಕೂಲ್ಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಗ್ಯೂ ಕುರಿತು ತಿಳಿಹೇಳಬೇಕು. ಪ್ರಮುಖವಾಗಿ ಲಾರ್ವಾ ಉತ್ಪತ್ತಿ ಕಂಡುಬಂದಲ್ಲಿ, ಅದನ್ನ ನಾಶ ಪಡಿಸುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಿ ಎಂದು ಸಿಇಒ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದರು.
ಜಿಲ್ಲಾವಾರು ಡೆಂಗ್ಯೂ ಕೇಸ್ಗಳನ್ನು ಪ್ರಕಟಿಸಲು ಹೇಳಿದ ಸಚಿವರು, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯವರು ಕೂಡ ವಾರಕ್ಕೆ ಒಂದು ದಿನ ಶುಕ್ರವಾರ ಫೀಲ್ಡ್ ಗಿಳಿದು ಕೆಲಸ ಮಾಡ್ಬೇಕು ಎಂದರು. ಒಂದು ಗಂಟೆಯ ಕಾಲವಾದರೂ ಡೆಂಗ್ಯೂ ನಿವಾರಣೆಗೆ ಮೀಸಲಿಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಬೇಕು. ಡೆಂಗ್ಯೂ ಟೆಸ್ಟ್ಗೆ ನಿಗದಿ ಮಾಡಿರುವ ದರವನ್ನ ಕಡ್ಡಾಯವಾಗಿ ಪಾಲಿಸಲು ಕ್ರಮ ವಹಿಸುವಂತೆಯೂ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದರು