ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ಅವರು, ಡೇವಿಡ್ ಮಿಲ್ಲರ್ ಅವರ ಐತಿಹಾಸಿಕ ಕ್ಯಾಚ್ ಅನ್ನು ಪಡೆದಿದ್ದರು.
ಜೂನ್ 29 ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್ಗಳಿಗೆ 176 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 177 ರನ್ಗಳ ಗುರಿಯನ್ನು ನೀಡಿತ್ತು.
T20 World Cup: ಪ್ರಧಾನಿ ಮೋದಿ ಜೊತೆಗಿನ ಪೋಟೋ ಹಂಚಿಕೊಂಡ ಟೀಮ್ ಇಂಡಿಯಾ
ಕ್ಯಾಚ್ ಪಡೆಯುವ ವೇಳೆ ಸೂರ್ಯಕುಮಾರ್ ಯಾದವ್ ಅವರು ಬ್ಯಾಲೆನ್ಸ್ ಕಳೆದುಕೊಂಡು ಬೌಂಡರಿ ಲೈನ್ ದಾಟಿದರೂ ಚೆಂಡನ್ನು ಗಾಳಿಗೆ ಹಾಕಿ ಪುನಃ ಮೈದಾನಕ್ಕೆ ಹೆಜ್ಜೆ ಇಡುತ್ತಿದ್ದ ವೇಳೆ ಗಾಳಿಯಲ್ಲಿ ಚೆಂಡನ್ನು ಪಡೆದರು.ಅಂತಿಮವಾಗಿ ಅವರು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 7 ರನ್ನಿಂದು ಸೋಲು ಅನುಭವಿಸಿತು.
ತನ್ನ ಸ್ಟನ್ನಿಂಗ್ ಕ್ಯಾಚ್ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, “ಒತ್ತಡ ಇರಲಿಲ್ಲ ಅಥವಾ ಅದನ್ನು ನಾನು ಅನುಭವಿಸಿಲ್ಲ ಎಂದು ಹೇಳಿದರೆ ನಾನು ಸುಳ್ಳು ಹೇಳುತ್ತಿದ್ದೇನೆಂದು ಅರ್ಥ. ಈ ಕ್ಯಾಚ್ ಬಿಟ್ಟಿದ್ದರೆ, ನಮ್ಮ ವಿರುದ್ದ ಏನು ನಡೆಯಬಹುದೆಂಬ ಅರಿವು ನನಗಿತ್ತು. ಹೌದು ನನಗೆ ಇದರ ಬಗ್ಗೆ ಮೊದಲೇ ತಿಳಿದಿತ್ತು. ಆದರೆ, ನಾನು ಒಂದು ಅಂಶವನ್ನು ಇಲ್ಲಿ ಹೇಳಬೇಕಾಗುತ್ತದೆ.
“ಅವರು (ದಿಲಿಪ್) ನಮ್ಮ ಜೊತೆ ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದಾರೆ. ಪ್ರತಿಯೊಬ್ಬರೂ ಕನಿಷ್ಠ 15 ನಿಮಿಷಗಳ ಕಾಲ ಇವರು ಜೊತೆ ತರಬೇತಿ ಪಡೆಯತ್ತಿದ್ದೆವು. ಬ್ಯಾಟ್ಸ್ಮನ್ಗಳಾಗಿ ನಾವು ಒಂದು ವಿಭಾಗಕ್ಕೆ ಕೊಡುಗೆ ನೀಡುತ್ತೇವೆ. ಇಲ್ಲಿ ಫೀಲ್ಡಿಂಗ್ ತರಬೇತಿ ಯಾರಿಗೂ ಗೊತ್ತಾಗುವುದಿಲ್ಲ. ತಂಡದಲ್ಲಿ ಪ್ರತಿಯೊಬ್ಬರೂ ಕೂಡ ಫೀಲ್ಡಿಂಗ್ ಕೋಚ್ ಬಳಿ ತರಬೇತಿ ಪಡೆದಿದ್ದಾರೆ ಹಾಗೂ ಅವರ ಫಲಿತಾಂಶ ಇಲ್ಲಿ ಕಾಣಿಸುತ್ತಿದೆ