ಮಳೆಗಾಲ ಶುರುವಾದ್ರೆ ಸಾಕು ಒಂದಿಲ್ಲೊಂದು ಸಮಸ್ಯೆಗಳು ಶುರುವಾಗೋದು ಕಾಮನ್.. ಆದ್ರೆ ಆರೋಗ್ಯದ ವಿಚಾರ ಬಂದ್ರೆ ಸಾಕು ಆತಂಕ ಮನೆ ಮಾಡುತ್ತೆ..ಅಂತಹ ಆತಂಕಕ್ಕೆ ಕಾರಣ ಡೆಂಗ್ಯೂ ಜ್ವರ..ಹೌದು ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ನರ್ತನ ಶುರುವಾಗಿದೆ..
ಮೇಲಿಂದ ಮೇಲೆ ಮಳೆ ಬಂದು ಅಲ್ಲಿ ನೀರು ಸಂಗ್ರಹ ಆಗ್ತಿರೋದು ಡೆಂಗ್ಯೂ ಹರಡಲು ಕಾರಣವಾಗ್ತಿದೆ..ಮೈಕ್ ನೋವು ಜ್ವರ ಸುಸ್ತು ಹೀಗೆ ಕೆಲವು ಲಕ್ಷಣಗಳಿಂದ ಜಿಲ್ಲೆಯಲ್ಲಿ ಬಳಲುತ್ತಿದ್ದ 1784 ಜನರ ರಕ್ತದ ಸ್ಯಾಂಪಲ್ ಪರೀಕ್ಷೆ ಮಾಡಿದಾಗ 180 ಜನರಲ್ಲಿ ಡೆಂಗ್ಯೂ ಪಾಸಿಟಿವ್ ಬಂದಿದೆ.
ಖುದ್ದು ಆರೋಗ್ಯ ಇಲಾಖೆ ಈ ಮಾಹಿತಿ ಹೊರಹಾಕಿದೆ..ವಿಪರ್ಯಾಸ ಅಂದ್ರೆ ಕೇವಲ ಜೂನ್ ತಿಂಗಳಲ್ಲೇ ಅಂದ್ರೆ 30 ದಿನಗಳಲ್ಲಿ 36 ಜನರಿಗೆ ಪಾಸಿಟಿವ್ ಬಂದಿದ್ದು ಕಲಬುರಗಿ ಅರ್ಬನ್ ವ್ಯಾಪ್ತಿಯಲ್ಲಿ 14 ಕೇಸ್ ಪತ್ತೆಯಾಗಿವೆ..ಅಷ್ಟೇಅಲ್ಲ ಡೆಂಗ್ಯೂ ಅಲ್ಲದೇ 57 ಜನರಿಗೆ ಚಿಕನ್ ಗೂನ್ಯಾ ವಕ್ಕರಿಸಿದ್ದು ವಿಶೇಷ..