ಮಳೆಗಾಲ ಬಂದ್ರೇ ಸಾಕು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಶುರುವಾಗಿ ಬಿಡುತ್ತೆ. ದಟ್ಟ ಕಾಡಿನ ನಡುವೆ ಹಾಲ್ನೋರೆಯಂತೆ ಉಕ್ಕುವ ಜಲಪಾತಗಳನ್ನ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಪಾಲ್ಸ್ ಗೆ ಇದೀಗ ಜೀವ ಕಳೆ ಬಂದಿದೆ. ಮೂರು ರಾಜ್ಯದ ಸಾವಿರಾರು ಜನರು ಪಾಲ್ಸ್ ಕಣ್ತುಂಬಿಕೊಂಡು ವಿಕೇಂಡ್ ಗಳಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಅಷ್ಟಕ್ಕೂ ಬಾಬಾ ಪಾಲ್ಸ್ ಇರೋದೇಲ್ಲಿ? ಹೇಗೆ ಹೋಗಬೇಕು ಅಂತೀರಾ ಈ ಸ್ಟೋರಿ ನೋಡಿ..
ದಟ್ಟ ಕಾಡು, ಮಧ್ಯದಲ್ಲಿ ಬೃಹತ್ ಬಂಡೆಗಲ್ಲುಗಳು, ಹಾಲ್ನೋರೆಯಂತೆ ಉಕ್ಕುತ್ತಿರುವ ನೀರು, ಒಂದಲ್ಲಾ ಎರಡಲ್ಲಾ ಕಣ್ಣು ಹಾಯಿಸಿದ ಕಡೆಗಳೆಲ್ಲಾ ಜಪಲಾತದ ದೃಶ್ಯ. ಪಾಲ್ಸ್ ನೋಡಲು ಮುಗಿಬಿದ್ದ ಜನರು. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿರುವ ಬಾಬಾ ಪಾಲ್ಸ್ ನಲ್ಲಿ. ಮಳೆಗಾಲ ಆರಂಭ ಆದ್ರೇ ಸಾಕು ಬಾಬಾ ಪಾಲ್ಸ್ ಗೆ ಜೀವ ಕಳೆ ಬಂದು ಬಿಡುತ್ತೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು,
ಇದೇ ಕಾರಣಕ್ಕೆ ಗುಡ್ಡದ ಮೇಲಿಂದ ಅಲ್ಲಲ್ಲಿ ನೀರು ಝರಿಗಳಾಗಿ ಉಕ್ಕುತ್ತೆ. ಅದರಲ್ಲೂ ಬೃಹತ್ ಬಂಡೆಗಲ್ಲಿನ ಮೇಲಿಂದ ಸಾವಿರ ಅಡಿಗಳ ಮೇಲಿಂದ ನೀರು ಉಕ್ಕುವುದನ್ನ ನೋಡಲು ಎರಡು ಕಣ್ಣು ಸಾಲದಾಗದು ಅಷ್ಟೊಂದು ಅದ್ಬುತವಾಗಿರುತ್ತೆ ಆ ದೃಶ್ಯ. ಮಹಾರಾಷ್ಟ್ರದ ಸಾವಂತವಾಡಿಯ ಚೌಕುಲಾ ಎಂಬ ಗ್ರಾಮದ ಹೊರ ವಲಯದಲ್ಲಿ ಈ ಪಾಲ್ಸ್ ಗಳಿದ್ದು ಒಂದೇ ಕಡೆ ಒಂದು ಕಿಮೀ ಅಂತರದಲ್ಲಿ ನಾಲ್ಕೈದು ಪಾಲ್ಸ್ ಗಳು ಪ್ರವಾಸಿಗರಿಗೆ ಸಿಗುತ್ತೆ.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ಇನ್ನೂ ಬಾಬಾ ಪಾಲ್ಸ್ ಈ ವರ್ಷದಿಂದ ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ಈ ಮೊದಲು ಪಾಲ್ಸ್ ನಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಅಂಬೋಲಿ ಪಾಲ್ಸ್ ಗೆ ಸಾಕಷ್ಟು ಪ್ರವಾಸಿಗರು ಬರ್ತಿದ್ದು ಆದ್ರೇ ಈ ಬಾರಿ ಅಲ್ಲಿಗಿಂತ ಬಾಬಾ ಪಾಲ್ಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬೆಳಗಾವಿಯಿಂದ 50 ಕಿಮೀ ದೂರದಲ್ಲಿರುವ ಈ ಪಾಲ್ಸ್ ಗೆ ಸದ್ಯಕ್ಕೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ಹೋಗಬಹುದಾಗಿದೆ. ಇನ್ನೂ ಚೌಕುಲಾ ಅನ್ನೋ ಗ್ರಾಮದಿಂದ ಎರಡು ಕಿಮೀ ಕಾಲ್ನಡಿಗೆಯಲ್ಲಿ ಹೋದ್ರೇ ಈ ಪಾಲ್ಸ್ ಸಿಗುತ್ತೆ.
ಆರಂಭದಲ್ಲಿ ಸಣ್ಣ ಝರಿಗಳಾಗಿ ಜಲಪಾತ ಸಿಕ್ರೇ ಮುಂದೆ ಹೋದಂತೆ ನಾಲ್ಕು ಬಂಡೆಗಲ್ಲಿನ ಮೇಲೆ ಉಕ್ಕುವ ಜಲಪಾತಗಳು ಸಿಗುತ್ತೆ. ಇನ್ನೂ ಪಾಲ್ಸ್ ಮುಂಭಾಗದಲ್ಲಿ ಎಲ್ಲರೂ ಹೋಗಬಹುದು ಆದ್ರೇ ಇಲ್ಲಿ ಬಂಡೆ ಗಲ್ಲಿನ ಮಧ್ಯೆ ಹೋಗಿ ಮೇಲಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡ್ತಾರೆ. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ದೂರದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನ ಹಾಗೂ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಬಂದು ಇಲ್ಲಿ ಎಂಜಾಯ್ ಮಾಡ್ತಾರೆ.
ಒಟ್ಟಾರೆ ವಿಕೇಂಡ್ ಬಂದ್ರೇ ಸಾಕು ಈ ಬಾಬಾ ಪಾಲ್ಸ್ ಪ್ರವಾಸಿಗರಿಂದ ತುಂಬಿ ತುಳುಕುತ್ತೆ. ಬಂಡೆಗಲ್ಲಿನ ಮೇಲಿಂದ ಉಕ್ಕುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಿದ್ದು ಬಸ್ ವ್ಯವಸ್ಥೆ ಮಾಡಿದ್ರೇ ಇನ್ನೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಕುಟುಂಬ ಸಮೇತ ಬಂದು ನೀವು ಒಂದು ಬಾರಿ ಈ ಪಾಲ್ಸ್ ನಲ್ಲಿ ಎಂಜಾಯ್ ಮಾಡಿ ಧುಮ್ಮಕ್ಕುವ ಜಲಪಾತದ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಿ.