ಬಾಗಲಕೋಟೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ದಿನೇದಿನೆ ಒಳಹರಿವು ಅಧಿಕವಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ದಿನೇದಿನೆ ಹೆಚ್ಚುತ್ತಿದ್ದರಿಂದ ಕಳೆದ ಮೂರು ದಿನಗಳಲ್ಲೇ 6 ಟಿಎಂಸಿಗೂ ಅಧಿಕ ನೀರು ಸಂಗ್ರಹಗೊಂಡಿದೆ.
ಜೂ.30ರಂದು 35.340 ಟಿಎಂಸಿ ನೀರು ಸಂಗ್ರಹವಾಗಿತ್ತು. ಅಂದು ಒಳಹರಿವು 10,557 ಕ್ಯುಸೆಕ್ ಇತ್ತು. ಜು.1ರಂದು ಒಳಹರಿವಿನ ಪ್ರಮಾಣ 19,978 ಕ್ಯುಸೆಕ್ಗೆ ಹೆಚ್ಚಳವಾಗಿದ್ದಾಗ 37.029 ಟಿಎಂಸಿ ನೀರು, 2ರಂದು 39.082 ಟಿಎಂಸಿ ನೀರು ಸಂಗ್ರಹವಾಗಿದ್ದರೆ ಒಳಹರಿವಿನ ಪ್ರಮಾಣ 24,761 ಕ್ಯುಸೆಕ್ ಇತ್ತು. ಬುಧವಾರ ಒಳಹರಿವಿನ ಪ್ರಮಾಣ 27,385 ಕ್ಯುಸೆಕ್ಗೆ ಹೆಚ್ಚಳಗೊಂಡಿದ್ದು, 41.411 ಟಿಎಂಸಿ ನೀರು ಸಂಗ್ರಹವಾಗಿದೆ.