ಬೆಳಗಾವಿ: ಮಳೆಗಾಲ ಪ್ರಾರಂಭವಾದರೆ ಸಾಕು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತವೆ. ಬೆಳಗಾವಿಯಿಂದ 60km ದೂರದಲ್ಲಿರುವ ಮಹಾರಾಷ್ಟ್ರದಲ್ಲಿ ಇರೋ ಬಾಬಾ ಫಾಲ್ಸ್ ಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಬೆಟ್ಟದಲ್ಲಿರುವ ಕಲ್ಲು ಬಂಡೆಗಳ ಮೇಲೆ ನೀರು ಹರಿವ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹೆಚ್ಚಾಗ್ತಿದೆ.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ಬೆಟ್ಟದ ಕಲ್ಲುಗಳ ಮೇಲಿನಿಂದ ಜಲಧಾರೆ ಹರಿದು ಕೆಳಗೆ ಬೀಳುವ ದೃಶ್ಯ ನೋಡೋದೆ ಒಂದು ಸೊಬಗು. ಸಧ್ಯ ಮಳೆಗಾಲ ಇದ್ದರೂ ಸಹ ಅಷ್ಟಿಷ್ಟು ಮಳೆಯಾಗಿ ಬಾಬಾ ಫಾಲ್ಸ್ ತನ್ನ ಸೊಬಗು ಮೈದಳಿದಿದೆ. ಸದ್ಯ ಈ ಜಲಪಾತ ಪ್ರಕೃತಿ ಆರಾಧಕ ರನ್ನು ಬಾಬಾ ಎಂದು ಫಾಲ್ಸ್ ಕೈ ಬೀಸಿ ಕರೆಯುತ್ತಿದೆ. ಬೆಳಗಾವಿ ಸೇರಿ ರಾಜ್ಯದಿಂದಲೇ ಅತಿ ಹೆಚ್ಚು ಪ್ರವಾಸಿಗರು ಇಲ್ಲಿ ಹೋಗುತ್ತಿದ್ದಾರೆ.