ಬೆಂಗಳೂರು:- ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪ್ರಾಪ್ತರ ಬಳಕೆ ಆಗಿಲ್ಲ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ಪಷ್ಟನೆ ನೀಡಿದ್ದಾರೆ
World Cup 2024: ವಿಶ್ವಕಪ್ ಟ್ರೋಫಿ ಜತೆ ತವರಿಗೆ ಬಂದಿಳಿದ ಟೀಮ್ ಇಂಡಿಯಾ..!
ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಬೆನ್ನಲ್ಲೇ ಮಹಿಳಾ ಆಯೋಗ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಎಂಟ್ರಿ ಕೊಟ್ಟಿತ್ತು. ಒಂದು ಕಡೆ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರ ಪರವಾಗಿ ಮಹಿಳಾ ಆಯೋಗ ಫೀಲ್ಡಿಗೆ ಇಳಿದಿದ್ದರೆ, ಮತ್ತೊಂದು ಕಡೆ ಪ್ರಕರಣದಲ್ಲಿ ಅಪ್ರಾಪ್ತೆಯರು ಕೂಡ ಸಿಲುಕಿರಬಹುದು ಅನ್ನೋ ಅನುಮಾನ ಕೂಡ ಮಕ್ಕಳ ರಕ್ಷಣಾ ಆಯೋಗಕ್ಕೆ ಶುರುವಾಗಿತ್ತು.
ಈ ಬೆನ್ನಲ್ಲೇ ಅಲರ್ಟ್ ಆದ ಆಯೋಗ, ಕೂಡಲೇ ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಈ ಬಗ್ಗೆ ವರದಿ ಕೇಳಿತ್ತು. ಜೊತೆಗೆ ಅಂತಹವರು ಯಾರಾದರೂ ಇದ್ದರೆ ನೇರವಾಗಿ ಆಯೋಗವನ್ನೇ ಸಂಪರ್ಕಿಸುವಂತೆ ಮನವಿ ಕೂಡ ಮಾಡಿತ್ತು. ಆದರೆ ಇಲ್ಲಿಯ ತನಕ ಎಸ್ಐಟಿಯಿಂದಲೂ (SIT) ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ತೊಂದರೆಗೆ ಒಳಗಾದವರು ಕೂಡ ಮುಂದೆ ಬಂದಿಲ್ಲ. ಹೀಗಾಗಿ ಸದ್ಯ ಪ್ರಕರಣದಲ್ಲಿ ಅಪ್ರಾಪ್ತೆಯರ ಬಳಕೆ ಆಗಿಲ್ಲ ಎಂಬ ನಿರ್ಧಾರಕ್ಕೆ ಆಯೋಗ ಬಂದಿದೆ. ಇನ್ನೂ ಪ್ರಕರಣ ಸಂಬಂಧ ಈಗಲೂ ಕೂಡ ಆಯೋಗ ಮನವಿ ಮಾಡಿದೆ. ಒಂದೊಮ್ಮೆ ಅಂತಹವರು ಯಾರಾದರೂ ಇದ್ದರೆ ಈಗಲೂ ಮುಂದೆ ಬರುವಂತೆ ಮನವಿ ಮಾಡಿದ್ದು, ಸುರಕ್ಷತೆ ಒದಗಿಸುವುದಾಗಿ ತಿಳಿಸಿದ್ದಾರೆ.