ಬೆಂಗಳೂರು:- ಪೋಷಕರಿಗೆ ಡೆಂಗ್ಯೂ ಜೊತೆ ಮತ್ತೊಂದು ಆತಂಕ ಶುರುವಾಗಿದ್ದು, ಮಕ್ಕಳಲ್ಲಿ ಕಾಲುಬಾಯಿ ರೋಗ ಹೆಚ್ಚಾಗುತ್ತಿದೆ.
ಈ ರೋಗ ಸಾಮಾನ್ಯವಾಗಿ 10 ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್ಸಾಕಿ ವೈರಸ್ ದೇಹ ಸೇರುವುದರಿಂದ ಸೋಂಕು ತಗಲುತ್ತದೆ. ಇದು ಲಾಲಾರಸ, ಮಲ, ಉಸಿರಾಟದ ಹಾಗೂ ಸೋಂಕಿತ ಮಗುವಿನ ಸಂಪರ್ಕದ ಮೂಲಕವೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಅತ್ಯಂತ ಸುಲುಭವಾಗಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ.
ಕೂದಲು ಉದುರುವುದು ಯಾಕೆ ಗೊತ್ತಾ!?.. ತಲೆಗೆ ಶಾಂಪೂ ಹಚ್ಚಿದ ಬಳಿಕ ಈ ತಪ್ಪು ಮಾಡೋದ್ರಿಂದ!
ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಬರುವ 20 ಜ್ವರದ ಪ್ರಕರಣದಲ್ಲಿ 12 ಪ್ರಕರಣಗಳು ಕಾಲುಬಾಯಿ ರೋಗದ್ದಾಗಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, 10 ವರ್ಷದೊಳಗಿನ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. 10 ವರ್ಷ ಮೇಲ್ಪಟ್ಟವರಲ್ಲಿ ಈ ವೈರಸ್ ತೀವ್ರತೆ ಪ್ರಮಾಣ ತುಂಬಾ ಕಡಿಮೆ ಇರಲಿದ್ದು, ಕೆಲವೊಂದು ಶಾಲೆಗಳಲ್ಲಿ ಕಾಲು ಬಾಯಿ ರೋಗವಿದ್ದ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಶಾಲಾ ಶಿಕ್ಷಕರು ಮನವಿ ಮಾಡಿದ್ದಾರೆ.
ಕಾಲುಬಾಯಿ ರೋಗದ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಈ ಸೋಂಕು ಹೆಚ್ಚು ವೇಗವಾಗಿ ಹರಡುತ್ತದೆ. ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಜೊತೆಗೆ ಈ ಸೋಂಕು ಹೆಚ್ಚಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಜೀವಕ್ಕೆ ಕುತ್ತು ತರುವ ಸಾಧ್ಯಾತೆ ಇರುತ್ತದೆ.