ಬೆಂಗಳೂರು:- ನಗರದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಜತೆ ಈಗ ಹೊಸದೊಂದು ಕಿರಿಕಿರಿ ಉಂಟಾಗಿದೆ.
Darshan Arrest: ಇಂದು ಡಿ ಗ್ಯಾಂಗ್ ಕೋರ್ಟ್ ಗೆ ಹಾಜರಾಗಲ್ಲ… ಯಾಕೆ ಗೊತ್ತಾ!?
ಬೀದಿ ದನಗಳಿಂದಾಗಿ ವಾಹನ ಸವಾರರು ರೋಸಿ ಹೋಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಬೀದಿ ಬದಿಯ ದನಗಳು ರಾಜಾರೋಷವಾಗಿ ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ಹೇಗೆ ಬೇಕೊ ಹಾಗೇ ಓಡಾಡುವುದರಿಂದ, ಮಲಗುವುದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನ ಸವಾರರು ರಸ್ತೆಯಲ್ಲಿ ಓಡಾಡಲು ಕೂಡ ಭಯ ಪಡುವಂತಾಗಿದೆ. ಈ ದನಗಳಿಗೆ ಯಾರು ಇಲ್ಲ ಅಂತ ಅಲ್ಲ, ಇವುಗಳಿಗೆ ಮಾಲೀಕರು ಕೂಡ ಇದ್ದಾರೆ. ಅವರು ಅವುಗಳನ್ನ ಲಂಗು ಲಗಾಮು ಇಲ್ಲದ ಹಾಗೇ ಬಿಟ್ಟು ಬಿಡುತ್ತಾರೆ. ಇದರಿಂದ ದನಗಳು ಆಹಾರ ಅರಸಿ ಮಾರುಕಟ್ಟೆ ಪ್ರದೇಶ, ಸಾರ್ವಜನಿಕರು ಕಸ ಎಸೆಯುವಂತಹ ಪ್ರದೇಶಗಳಲ್ಲಿ ಓಡಾಡುವುತ್ತವೆ.
ರಸ್ತೆಯಲ್ಲಿ ಓಡಾಡುವ ದನಗಳು ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುವುದಲ್ಲದೇ ಇನ್ನಿತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ಸವಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ಹೆಚ್ಚುತ್ತಿರುವುದರಿಂದ ಪೊಲೀಸರಿಗೆ ಟೆನ್ಷನ್ ಹೆಚ್ಚಾಗಿದೆ. ಈ ಬಗ್ಗೆ ತಲೆ ಕೆಡಿಸಿಕೊಂಡು ರಹಸ್ಯ ಭೇದಿಸಲು ಹೊರಟ ಸಂಚಾರಿ ಪೊಲೀಸರಿಗೆ ಕಂಡಿದ್ದು ದನಗಳ ಕಾಟದ ದೃಶ್ಯ. ರಸ್ತೆಯಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಸವಾರರಿಗೆ ತೊಂದರೆಗಳಾಗುತ್ತಿವೆ. ದನಗಳ ಕಾಟ ತಪ್ಪಿಸಲು ಹೋಗಿ ಚಾಲಕರು, ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.