ವೆಸ್ಟ್ ಇಂಡೀಸ್ ದ್ವೀಪರಾಷ್ಟ್ರಗಳಲ್ಲಿ ಎದ್ದಿರುವ ಭಾರಿ ಚಂಡಮಾರುತ ಕಾರಣ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಆಟಗಾರರು ಬಾರ್ಬೆಡೋಸ್ನಲ್ಲೇ ಉಳಿದುಕೊಳ್ಳುವಂತ್ತಾಗಿದೆ. ಈ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ.
ಬಾರ್ಬೆಡೋಸ್ನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಟೀಮ್ ಇಂಡಿಯಾ ಆಟಗಾರರು ತಂಗಿದ್ದು, ಬೀಚ್ ಪಕ್ಕದಲ್ಲಿರುವ ತಮ್ಮ ಕೊಠಡಿಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿಡಿಯೋ ಕರೆಮಾಡಿ ಚಂಡಮಾರುತದ ರಭಸ ಹೇಗಿದೆ ಎಂಬುದನ್ನು ವಿರಾಟ್ ತೋರಿಸುತ್ತಿದ್ದಾರೆ. ಇದನ್ನುಅವರೊಟ್ಟಿಗಿದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
https://x.com/ImTanujSingh/status/1808142214201331728?ref_src=twsrc%5Etfw%7Ctwcamp%5Etweetembed%7Ctwterm%5E1808142214201331728%7Ctwgr%5E2e80a41a716bb53e628b8bb4340cfcd4714153ee%7Ctwcon%5Es1_&ref_url=https%3A%2F%2Fvijaykarnataka.com%2Fsports%2Fcricket%2Fnews%2Fvirat-kohli-shows-barbados-hurricane-to-wife-anushka-sharma-in-video-call%2Farticleshow%2F111453011.cms
ಬರೋಬ್ಬರಿ 11 ವರ್ಷಗಳ ಬಳಿಕ ಟೀಮ್ ಇಂಡಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿತ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇನ್ನು ವರದಿಗಳ ಪ್ರಕಾರ ಭಾರತ ತಂಡದ ಆಟಗಾರರು ಬಾರ್ಬೆಡೋಸ್ನಿಂದ ನೇರವಾಗಿ ನ್ಯೂ ಡೆಲ್ಲಿಗೆ ಪ್ರಯಾಣ ಬೆಳೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು.
ಆದರೆ, ದ್ವೀಪರಾಷ್ಟ್ರದ ಹವಾಮಾನ ಕೆಟ್ಟಿರುವ ಕಾರಣ ಇದು ಇನ್ನು ಸಾಧ್ಯವಾಗಿಲ್ಲ. ಟೀಮ್ ಇಂಡಿಯಾ ಆಟಗಾರರು, ಕೋಚಿಂಗ್ ಬಳಗ, ಸಹಾಕ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಎಲ್ಲರೂ ಕೂಡ ಹವಾಮಾನ ತಿಳಿಯಾಗುವವರೆಗೂ ಅಲ್ಲೇ ಉಳಿದುಕೊಳ್ಳುವಂತೆ ಮಾಡಿದೆ. ಬರ್ಲಿ ಚಂಡಮಾಡುತ ಸೋಮವಾರದಿಂದ ವೆಸ್ಟ್ ಇಂಡೀಸ್ ನೆಲದಲ್ಲಿ ತಾಂಡವವಾಡುತ್ತಿದೆ.