ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಹೈಕೋರ್ಟ್ ನಿಂದ ಎಫ್ ಐ ಆರ್ ರದ್ದಾದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಪ್ರಶಾಂತ್ ಸಂಬರಗಿ ಮೇಲೆ ವಾಗ್ದಾಳಿ ಮಾಡಿದ್ರು. 3 ವರ್ಷಗಳ ಹಿಂದೆ ಸಂಬರಗಿ ಮೇಲೆ ಎರಡು ದೂರುಗಳನ್ನು ದಾಖಲಿಸಿರುವ ಸಂಜನಾಗಲ್ರಾನಿ ಕೇಸ್ ಸಂಬಂಧ ಕೋರ್ಟ್ ಗೆ ಹಾಜರಾಗಿದ್ರು.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ನಂತರ ಮಾತನಾಡಿದ ನಟಿ ಸಂಜನಾ ತನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಹೇಳಿಕೆಗಳನ್ನು ಕೊಟ್ಟು ಸುಳ್ಳು ಕೇಸ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿದ ಸಂಬರಗಿ ಮೇಲೆ ಕೇಸ್ ಹಾಕಿದ್ದೇನೆ. ಕೇಸ್ ವಿಚಾರಣೆ ಹಂತದಲ್ಲಿದೆ. ಆಗ ವ್ಯಕ್ತಿ ನನ್ನ ಮೇಲೆ ಸುಳ್ಳು ಹೇಳಿಕೆಗಳನ್ನು ಕೊಟ್ಟು ಚಿತ್ರ ಹಿಂಸೆ ಕೊಟ್ಟಿದ್ರು ಈಗ ಅವರು ಅನುಭವಿಸುತ್ತಿದ್ದಾರೆ ಅವರಿಗೆ ದೇವರು ಒಳ್ಳೆದು ಮಾಡ್ಲಿ ಎಂದು ಸಂಬರ್ಗಿ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ರು .