ಹುಬ್ಬಳ್ಳಿ: ‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿಕೆಯನ್ನು ವಿರೋಧಿಸುತ್ತೇನೆ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ ನೀಡಿದರು.
ಮಾಧ್ಯಮದವರ ಜೊತೆ ಮಾತನಾಡುತ್ತಾ, ‘ ಇಂಥ ಹೇಳಿಕೆ ಮೂಲಕ ಕೋಟ್ಯಾಂತರ ಹಿಂದುಳಿಗೆ ಅವಮಾನ ಮಾಡಿದ್ದೀರಿ. ಸಂಸತ್ ನಲ್ಲಿ ರಾಹುಲ್ ಗಾಂಧಿ ಹಿಂದುಗಳ ಬಗ್ಗೆ ಹೇಳಿಕೆ ವಿಚಾರ ಸರಿಯಲ್ಲ’ ಎಂದು ರಾಹುಲ್ ಗಾಂಧಿ ವಿರುದ್ಧ ಮುತಾಲಿಕ್ ವಾಗ್ದಾಳಿ ಮಾಡಿದರು. ಗರ್ವದಿಂದ ಹೇಳುತ್ತೇನೆ ನಾನೊಬ್ಬ ಹಿಂದು. ನಾನೊಬ್ಬನೇ ಅಲ್ಲ, ದೇಶದಲ್ಲಿ ಕೋಟ್ಯಾಂತರ ಜನರಿಗೆ ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮಿ ನಮ್ಮದು. ಇಲ್ಲಿ ಹುಟ್ಟಿದ್ದೇವೆ ಎಂದು ಹೇಳಲು ಹೆಮ್ಮೆ ಇದೆ. ನಾನು ಹಿಂಸಕ ಅಲ್ಲ, ನಾನು ಸುಳ್ಳು ಹೇಳಲ್ಲ. ಹಿಂದು ಧರ್ಮ ಎಂದಿಗೂ ಹಿಂಸೆಯನ್ನು ಭೋಧಿಸಿಲ್ಲ. ಹಿಂದು ಧರ್ಮ ಎಂದೂ ಹಿಂಸೆ ಭೋಧಿಸುವುದಿಲ್ಲ. ಹಿಂದು ಎಂದರೆ ‘ಸರ್ವೆ ಜನಾ ಸುಖಿನೋ ಭವಂತು’ ಎಲ್ಲರೂ ಸುಖವಾಗಿರಲಿ ಎಂದು ಹೇಳುವ ಏಕೈಕ ಧರ್ಮ ನಮ್ಮದು’ ಎಂದರು.