ಕೋಲಾರ:- ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಅಂಗೊಂಡಳ್ಳಿ ಸರ್ಕಾರಿ ಹೈಸ್ಕೂಲ್ ನಲ್ಲಿ ಜರುಗಿದೆ.
ಪ್ರೇಮಿಗಳ ಆತ್ಮಹತ್ಯೆಗೆ ಹೊಸ ಟ್ವಿಸ್ಟ್: ಮದುವೆಯಾಗಿದ್ರೂ ಮತ್ತೋರ್ವ ಯುವತಿ ಜೊತೆ ಲವ್ವಿಡವ್ವಿ!
ಮುಂಜಾನೆ ಮಾಸ್ಟ್ ಹಾಕಲಾಗಿದ್ದ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. 19 ಜನ ಮಕ್ಕಳಿಗೆ ಅಲರ್ಜಿ, ಮೈ ತುರಿಕೆ, ಮೈ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡ ಹಿನ್ನೆಲೆ ಆತಂಕ ಸೃಷ್ಟಿ ಆಗಿದೆ. ಕೂಡಲೇ 19 ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೇ ಚಿಕಿತ್ಸೆ ಕೊಡಲಾಗಿದೆ. ಒಂದು ಮಗುವಿಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಬಿಇಓ ಗಂಗರಾಮಯ್ಯ ಹಾಗೂ ಟಿಹೆಚ್ಓ ಡಾ.ಸುಗುಣ ಬೇಟಿ ಪರಿಶೀಲನೆ ಮಾಡಿದ್ದಾರೆ.