ಡ್ರೈವರ್ ಲೆಸ್ ಮೆಟ್ರೊಗಾಗಿ ಕಾಯ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಕಡ ಹೋಗುವ ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದಿದೆ. ಯಲ್ಲೋ ಲೈನ್ ಉದ್ಘಾಟನೆ ಕಾಲ ಹತ್ತಿರ ಬಂದಿದೆ. ಫೈಲೆಟ್ ಲೆಸ್ ಮೆಟ್ರೊ ಟೆಸ್ಟಿಂಗ್ ಗೆ ವೇಗ ಪಡೆದಿದ್ದು, ಇನ್ನೂ ಎರಡೇ ಹಂತ ಪಾಸ್ ಆದರೆ ಓಡಾಟ ಶುರುವಾಗುತ್ತೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದೊರಗಿನ ಮೆಟ್ರೋ ರೈಲು ಓಡಾಟದ ಕಾಲ ಸನೀಹವಾಗಿದೆ. ಕೆಲವೇ ದಿನಗಳಲ್ಲಿ ಡ್ರೈವರ್ ಲೆಸ್ ಮೆಟ್ರೊ ಹಳದಿ ಮಾರ್ಗದಲ್ಲಿ ಮೋಡಿ ಮಾಡಲಿದೆ. ಟ್ರಯಲ್ ರನ್ ಮುಗಿದಿದ್ದು ಈಗ ಸಿಗ್ನಲಿಂಗ್ ಟೆಸ್ಟ್ ಶುರುವಾಗಿದೆ.
ಸದ್ಯ ಹಳದಿ ಮಾರ್ಗದಲ್ಲಿ ಟ್ರಯಲ್ ರನ್ ಮುಕ್ತಾಯ, ಸಿಗ್ನಲಿಂಗ್ ಟೆಸ್ಟ್ ಆರಂಭವಾಗಿದೆ. ಕಳೆದ ಹದಿನೈದು ದಿನದ ಹಿಂದೆ ಲೋಕೋಪೈಲಟ್ಲೆಸ್ ರೈಲಿನ ಟ್ರಯಲ್ ರನ್ ಮಾಡಿದ್ದ ಬಿಎಂಆರ್ ಸಿಎಲ್, ಈಗ ಸಿಗ್ನಲಿಂಗ್ ಟೆಸ್ಟ್ ಶುರು ಮಾಡಿದೆ.
ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ಮಾಡಲಿರುವ ಮೆಟ್ರೋ ಅಧಿಕಾರಿಗಳು, ಇದು ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಟೆಸ್ಟ್ ನಡೆಸ್ತಾರೆ. ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಕೆ ಮಾಡ್ತಾರೆ. ಕೇಂದ್ರ ರೇಲ್ವೆ ಸುರಕ್ಷಾತ ಅಧಿಕಾರಿಗಳ ಪರಿಶಿಲನೆ ನಂತರೆ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಸಿಗುತ್ತೆ.
18.82 ಕಿಮೀ ಉದ್ದವಿರುವ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗದಲ್ಲಿ ಈ ರೈಲು ಸಂಚಾರ ಮಾಡಲಿದೆ. ಈ ಒಟ್ಟು 16 ಮೆಟ್ರೋ ಸ್ಟೇಷನ್ ಗಳು ಇರಲಿವೆ