ಮುಂಬೈ:- ಗೋರೆಗಾಂವ್ (ಪೂರ್ವ) ನ ನಿರ್ಲಾನ್ ಪಾರ್ಸಿ ಪಂಚಾಯತ್ ಕಾಂಪ್ಲೆಕ್ಸ್ನ ಕಾಲೋನಿಯಲ್ಲಿ ತಾಯಿ ಒಬ್ಬಳು ತನ್ನ ಮಕ್ಕಳಿಗೆ ಬೆಲ್ಟ್ನಿಂದ ಕ್ರೂರವಾಗಿ ಹೊಡೆದು ಶಿಕ್ಷಿಸುತ್ತಿರುವುದು ಕಂಡುಬಂದಿದೆ.
ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತ… ಮಣ್ಣಿನಡಿ ಸಿಲುಕಿದ ಕಾರ್ಮಿಕರು!
ಮಹಿಳೆಯೊಬ್ಬಳು ಮಕ್ಕಳನ್ನು ಬೆಲ್ಟ್ನಿಂದ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಬಾಂಬೆ ಹೈಕೋರ್ಟ್ ಮಾಜಿ ನ್ಯಾಯಾಧೀಶ ಶಾರುಖ್ ಕಥಾವಾಲಾ ತಾಯಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದಾರೆ
ವಿಡಿಯೊದಲ್ಲಿ ಮಹಿಳೆ ಮಕ್ಕಳನ್ನು ಬೆಲ್ಟ್ನಿಂದ ಹೊಡೆಯುವುದು ಮತ್ತು ಹೆದರಿಸುವುದು ಕಂಡುಬರುತ್ತದೆ. ಮಕ್ಕಳು ಭಯಭೀತರಾಗಿದ್ದು, ತಮ್ಮನ್ನು ಬಿಡುವಂತೆ ಬೇಡಿಕೊಳ್ಳುವುದನ್ನು ಕಾಣಬಹುದು. ಆದರೂ, ತಾಯಿ ಅಸಹಾಯಕ ಮಕ್ಕಳನ್ನು ಬೆಲ್ಟ್ನಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಆದರೆ ಈ ವಿಡಿಯೊ ಆಕೆಯ ಪತಿ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ ಪತಿ ತನ್ನ ಮಕ್ಕಳನ್ನು ರಕ್ಷಿಸಲು ಯಾಕೆ ಮುಂದೆ ಬಂದಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ
ವೀಡಿಯೊ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳನ್ನು ಬೆಲ್ಟ್ನಿಂದ ಹೊಡೆಯುತ್ತಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ