ಜಮ್ಮು:- ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳ ಬಸ್ ಬ್ರೇಕ್ ಫೇಲ್ ಆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್ನಲ್ಲಿ 44 ಪ್ರಯಾಣಿಕರು ಯಾತ್ರೆಯಿಂದ ಹಿಂದಿ ರುಗುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಭಾರತೀಯ ಸೈನಿಕರು ಎಲ್ಲಾ ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾರೆ.
BIGG NEWS: ಪ್ರಜ್ವಲ್ ರೇವಣ್ಣ ನೋಡಲು ಮೊದಲ ಬಾರಿಗೆ ಜೈಲಿಗೆ ಬಂದ HD ರೇವಣ್ಣ!
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್ನ ಹೋಶಿಯಾರ್ಪುರಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಹದಿನೇಳು ಮಂದಿ ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಟ್ಟು 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ರಸ್ತೆ ಮಧ್ಯದಲ್ಲಿ ಬಸ್ನ ಬ್ರೇಕ್ ಫೇಲ್ ಆಗಿದೆ. ಇದರ ಪರಿಣಾಮ ಬನಿಹಾಲ್ ಬಳಿಯ ನಾಚ್ಲಾನಾ ಬಳಿ ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಆಗಲಿಲ್ಲ. ಇದರಿಂದ ಬಸ್ನಲ್ಲಿದ್ದ ಪ್ರಯಾಣಿಕರು ಭಯಗೊಂಡು ತಮ್ಮ ಜೀವ ಉಳಿಸಿಕೊಳ್ಳಲು ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಹಲವಾರು ಪ್ರಯಾಣಿಕರು ಬಸ್ಸಿನಿಂದ ಜಿಗಿದ ಗಾಯಗೊಂಡಿದ್ದಾರೆ
ವಿಡಿಯೊದಲ್ಲೊ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ನಿಂದ ಪ್ರಯಾಣಿಕರು ಒಬ್ಬರಾಗಿಯೇ ಜಿಗಿದು ಕೆಳಗೆ ಬೀಳುತ್ತಿದ್ದಾರೆ. ಹಾಗೇ ಬಿದ್ದ ಪ್ರಯಾಣಿಕರಲ್ಲಿ ಕೆಲವರು ತಮ್ಮವರನ್ನು ಕಾಪಾಡಲು ಬಸ್ಸಿನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸೇನೆಯ ಜೊತೆಗೆ ಬಸ್ ಇದ್ದ ಕಡೆ ಬಂದು ತ್ವರಿತ ಕ್ರಮ ತೆಗೆದುಕೊಂಡಿದ್ದಾರೆ. ಸೈನಿಕರು ಬಸ್ ಅನ್ನು ನಿಲ್ಲಿಸಲು ಮತ್ತು ಹತ್ತಿರದ ಹೊಳೆಗೆ ಹೋಗದಂತೆ ತಡೆಯಲು ಕಲ್ಲುಗಳನ್ನು ಬಸ್ ನ ಚಕ್ರದ ಕೆಳಗೆ ಇಟ್ಟಿದ್ದಾರೆ. ಇದರಿಂದ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸೇನೆಯ ತಂಡಗಳು, ಆಂಬ್ಯುಲೆನ್ಸ್ ನೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ವೈದ್ಯಕೀಯ ನೆರವು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ