ಮುಂಬೈ:- ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂದಾಗಿದ್ದಾರೆ.
132 ಸೀಟುಗಳ ಬಸ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ವಿಮಾನದಲ್ಲಿರುವಂತೆ ಸಕಲ ಸೌಲಭ್ಯಗಳೂ ಇರಲಿದೆ. ಏರ್ ಹೋಸ್ಟೆಸ್ನಂತೆ ಬಸ್ ಹೋಸ್ಟೆಸ್ಗಳೂ ಕಾರ್ಯ ನಿರ್ವಹಿಸಲಿದ್ದು, ಈ ಬಸ್ನಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ” ಎಂದರು.
Namma Metro Alert: ರಾಜ್ಯದಲ್ಲಿ ಡೆಂಗ್ಯೂ ಕೇಸ್ ಹೆಚ್ಚಳ: ಹೈ ಅಲರ್ಟ್ ಆದ ನಮ್ಮ ಮೆಟ್ರೋ!
ʼʼಪರಿಸರ ಮಾಲಿನ್ಯ ಎನ್ನುವುದು ಸದ್ಯ ದೇಶ, ಜಗತ್ತು ಎದುರಿಸುವ ಬಹುದೊಡ್ಡ ಸಮಸ್ಯೆ. ಹೀಗಾಗಿ ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡದ ಪರ್ಯಾಯ ವ್ಯವಸ್ಥೆಗಳಿಗೆ ಒತ್ತು ನೀಡಲಿದೆ. ಅದರ ಭಾಗವಾಗಿ ಸಾರ್ವಜನಿಕ ಸಾರಿಗೆ ವಿಭಾಗದಲ್ಲಿಯೂ ಅಮೂಲಾಗ್ರ ಬದಲಾವಣೆ ಜಾರಿಗೆ ತರಲಾಗುವುದುʼʼ ಎಂದು ಹೇಳಿದ್ದಾರೆ.
ಈ ವೇಳೆ ಅವರು ತಮ್ಮ ಕನಸಿನ 132 ಸೀಟುಗಳ ಬಸ್ನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼ132 ಆಸನಗಳ ಬಸ್ ಅನ್ನು ಪಚಯಿಸಲು ಮುಂದಾಗಿದ್ದೇವೆ. ಇದರ ಪ್ರಾಯೋಗಿಕ ಸಂಚಾರ ನಾಗ್ಪುರದಲ್ಲಿ ನಡೆಯಲಿದೆ. ಈ ಬಸ್ ವಿಮಾನದಂತಹ ಆಸನ ಮತ್ತು ಬಸ್ ಹೋಸ್ಟೆಸ್ ಅನ್ನು ಒಳಗೊಂಡಿದೆ. ಸಾಮಾನ್ಯ ಡೀಸೆಲ್ ಬಸ್ಗಳಿಗಿಂತ ಅಗ್ಗವಾಗಿರಲಿದೆ. ಮಾಲಿನ್ಯರಹಿತ ಶಕ್ತಿಯ ಮೂಲಗಳಲ್ಲಿ ಚಲಿಸಲಿದೆʼʼ ಎಂದು ವಿವರಿಸಿದ್ದಾರೆ. ʼʼಭಾರತವನ್ನು ಇಂಧನದ ಆಮದುದಾರ ದೇಶವನ್ನಾಗಿಸುವ ಬದಲು ಬದಲು ರಫ್ತುದಾರ ದೇಶವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿʼʼ ಎಂದು ಅವರು ತಿಳಿಸಿದ್ದಾರೆ.
ಬಸ್ನಲ್ಲಿ ಎಲ್ಲ ಸೌಲಭ್ಯಗಳನ್ನು ಅಳವಡಿಸುವಂತೆ ಸೂಚಿಸಿದ್ದೇನೆ. ಸೀಟಿನ ಮುಂದೆ ಲ್ಯಾಪ್ಟಾಪ್ ಇಡಲು ಸ್ಥಳಾವಕಾಶ, ಹವಾನಿಯಂತ್ರಣ ವ್ಯವಸ್ಥೆ, ಆರಾಮದಾಯಕ ಕುರ್ಚಿಗಾಗಿ ಬೇಡಿಕೆ ಇಟ್ಟಿದ್ದೇನೆ. ಏರ್ ಹೋಸ್ಟೆಸ್ಗಳಂತೆ ಪ್ರಯಾಣಿಕರಿಗೆ ಹಣ್ಣು, ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ನೀಡಲು ಬಸ್ ಹೋಸ್ಟೆಸ್ಗಳು ಇರಲಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಈ ಬಸ್ನ ವೆಚ್ಚ ಡೀಸೆಲ್ ಬಸ್ಗಿಂತ ಶೇ. 30ರಷ್ಟು ಕಡಿಮೆ ಇರಲಿದೆ. ಸೌರಶಕ್ತಿಯನ್ನು ಬಳಸಿದರೆ, ವೆಚ್ಚ ಇನ್ನೂ ಕಡಿಮೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ