ಹೇಳಿ ಕೇಳಿ ಇದು ಹಲಸಿನ ಹಣ್ಣುಗಳ ಕಾರುಬಾರಿನ ಇದು. ಹಲಸಿನ ಹಣ್ಣನ್ನು ಪಕ್ಕದ ಮನೆಯವರು ತಂದು ಯಾವುದಾದರೂ ಮೂಲೆಯಲ್ಲಿ ಅವಿತಿಟ್ಟರೂ, ಅದರ ವಾಸನೆ ನಮ್ಮ ಮೂಗಿಗೆ ಬಡಿಯುತ್ತದೆ. ಒಂದು ವೇಳೆ ಕದ್ದು ಮುಚ್ಚಿ ನಾವು ತಂದು ಮನೆಯಲ್ಲಿ ಹಲಸಿನ ಹಣ್ಣು ಕೊಯ್ದರೂ, ಅಕ್ಕಪಕ್ಕದವರು ಅದನ್ನು ಪರೀಕ್ಷಿಸಲೆಂದೇ ಹಾಗೆ ಸುಮ್ಮನೆ ಒಂದು ರೌಂಡ್ ನಮ್ಮ ಮನೆಗೆ ಬಂದು ಹೋಗುವುದು ವಾಡಿಕೆ. ಹಲಸಿನ ಹಣ್ಣಿನ ತಾಕತ್ತೇ ಅಂತಹದ್ದು. ಮಳೆಗಾಲ, ಚಳಿಗಾಲ ಕಳೆದು ಬೇಸಿಗೆ ಕಾಲವನ್ನು ಬರಮಾಡಿಕೊಳ್ಳುವ ಸಮಯದಲ್ಲಿ ನಮ್ಮ ದೇಹದ ಶೀತದ ವಾತಾವರಣವನ್ನು ನಿವಾರಣೆ ಮಾಡಲೆಂದೇ ದೇವರು ನಮಗಾಗಿ ಕರುಣಿಸಿರುವ ಇದೊಂದು ಹಣ್ಣು ನಿಜಕ್ಕೂ ವರದಾನವೇ ಸರಿ
Hair Cut Benefit: ಕೂದಲನ್ನು ಪದೇ ಪದೇ ಕತ್ತರಿಸುವುದರಿಂದ ಆಗುವ ಉಪಯೋಗಗಳು!
ಟಮಿನ್ ಸಿ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅನೇಕ ಮಂದಿ ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ, ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.
ಆದರೆ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಹಲಸಿನ ಹಣ್ಣಿನ ಸೇವನೆಯಿಂದ ದೂರವಿರುವುದು ಉತ್ತಮ. ಇಲ್ಲದಿದ್ದರೆ ಅಪ್ಪಿತಪ್ಪಿ ಈ ಹಣ್ಣನ್ನು ತಿಂದರೆ ನೀವೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ
ಹಲಸಿನ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ ಅಂಶ ಇರುತ್ತದೆ. ಅಲ್ಲದೇ ಹಲಸಿನ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು. ಹಲಸಿನ ಹಣ್ಣಿನ ಪ್ರತಿಯೊಂದು ಭಾಗವೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಲಸಿನ ತೊಲೆ, ಹಲಸಿನ ಬೀಜ ಮತ್ತು ಹಣ್ಣು ಎಲ್ಲವನ್ನು ಕೂಡ ತಿನ್ನಬಹುದು.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ಅಲ್ಲದೇ, ಚರ್ಮ ಮತ್ತು ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು, ಹಲಸಿನ ಹಣ್ಣನ್ನು ತಿನ್ನುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಲಸಿನ ಹಣ್ಣು ತಿಂದರೆ ರಿಕೆಟ್ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ರಕ್ತಹೀನತೆಯ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.
ಆದರೆ ಕೆಲವರು ಮಾತ್ರ ಹಲಸಿನ ಹಣ್ಣನ್ನು ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಅಂತಹವರು ಹಲಸನ್ನು ತಿಂದರೆ ಆರೋಗ್ಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನಿಂದ ದೂರವಿರುವುದು ಉತ್ತಮ.