ಬೆಂಗಳೂರು: ಮಳೆಗಾಲ ಶುರುವಾದರೆ ಸಾಕು ಸಾಕಷ್ಟು ಮಂದಿ ನಾನಾ ರೀತಿಯ ಅನಾರೋಗ್ಯಗಳಿಗೆ ಒಳಗಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬೇಗ ಜ್ವರ, ಶೀತ, ಸೋಂಕುಗಳು ಹರಡುತ್ತದೆ.ನಿಂತ ನೀರಿನ ಜಾಗವೇ ಸೊಳ್ಳೆಗಳಿಗೆ ಮನೆ. ಅಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಇನ್ನು ಬದುಕಲು ಹೊಟ್ಟೆಪಾಡು ನಡೆಯಬೇಕಲ್ಲ. ಮನುಷ್ಯರ ಮೇಲೆ ದಾಳಿ ಮಾಡಿ ರಕ್ತ ಹೀರುತ್ತವೆ. ಸುಮ್ಮನೆ ರಕ್ತ ಹೀರಿಕೊಂಡು ಹೋದರೆ ಪರವಾಗಿಲ್ಲ. ಆದರೆ ಅವುಗಳ ಕಡಿತದಿಂದ ಮಾರಕ ಸೋಂಕು ಹರಡುತ್ತಿರುವುದು ಸೊಳ್ಳೆಗಳ ಬಗೆಗೆ ಮನುಷ್ಯನ ಆತಂಕಕ್ಕೆ ಪ್ರಮುಖ ಕಾರಣ.
ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಷ್ಟಕ್ಕೂ ಏನಿದು ಡೆಂಗ್ಯೂ? ಈ ವೈರಸ್ನ ಇತಿಹಾಸ ಏನು? ಸೋಂಕು ಹೇಗೆ ಹರಡುತ್ತದೆ? ರೋಗ ಲಕ್ಷಣಗಳೇನು? ತಡೆಯುವುದು ಹೇಗೆ? ಚಿಕಿತ್ಸಾ ಕ್ರಮಗಳೇನು? ಬನ್ನಿ ನೋಡೋಣ!
White Topping: ಸಿಲಿಕಾನ್ ಸಿಟಿಯಲ್ಲಿ ವೈಟ್ ಟಾಪಿಂಗ್ʼಗೆ BBMP ಸಿದ್ಧತೆ: ಯಾವ್ಯಾವ ರಸ್ತೆಯಲ್ಲಿ ಮಾಡ್ತಾರೆ?
ಏನಿದು ಡೆಂಗ್ಯೂ?
ಇದೊಂದು ವೈರಸ್.
ಯಾವುದರಿಂದ ಹರಡುತ್ತೆ?
ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ.
ಡೆಂಗ್ಯೂ ವೈರಸ್ ಮೂಲ ಯಾವುದು?
ಡೆಂಗ್ಯೂ ತರಹದ ಕಾಯಿಲೆಯು ಮೊದಲು ಚೀನಾದಲ್ಲಿ ಜಿನ್ ರಾಜವಂಶದಿಂದ (265-420 ಶತಮಾನ) ಬಂದಿದೆ. 17 ನೇ ಶತಮಾನದಲ್ಲಿ ಡೆಂಗ್ಯೂಗೆ ಹೋಲುವ ಸಾಂಕ್ರಾಮಿಕ ರೋಗಗಳು ಸಂಭವಿಸಿದವು ಎಂಬುದಕ್ಕೆ ಪುರಾವೆಗಳಿವೆ.
ವೈರಸ್ ಪತ್ತೆಯಾಗಿದ್ದು ಯಾವಾಗ, ಹೇಗೆ?
1943 ರಲ್ಲಿ. ರೆನ್ ಕಿಮುರಾ ಮತ್ತು ಸುಸುಮು ಹೊಟ್ಟಾ ಮೊದಲು ಡೆಂಗ್ಯೂ ವೈರಸ್ ಅನ್ನು ಪ್ರತ್ಯೇಕಿಸಿದರು. ಈ ಇಬ್ಬರು ವಿಜ್ಞಾನಿಗಳು ಜಪಾನ್ನ ನಾಗಸಾಕಿಯಲ್ಲಿ 1943 ರಲ್ಲಿ ಡೆಂಗ್ಯೂ ಸಾಂಕ್ರಾಮಿಕ ಸಮಯದಲ್ಲಿ ತೆಗೆದುಕೊಂಡ ರೋಗಿಗಳ ರಕ್ತದ ಮಾದರಿಗಳನ್ನು ಅಧ್ಯಯನ ಮಾಡಿದ್ದರು.
ಸೋಂಕು ವಿಶ್ವದಾದ್ಯಂತ ಹರಡಿದ್ದು ಹೇಗೆ?
ಡೆಂಗ್ಯೂನ ಪ್ರಮುಖ ಸೊಳ್ಳೆ ವಾಹಕವಾದ ಈಡಿಸ್ ಈಜಿಪ್ಟಿ 15 ರಿಂದ 19 ನೇ ಶತಮಾನಗಳಲ್ಲಿ ಗುಲಾಮರ ಅಂತರರಾಷ್ಟ್ರೀಯ ವ್ಯಾಪಾರದ ವಿಸ್ತರಣೆಯಿಂದಾಗಿ ಆಫ್ರಿಕಾದಿಂದ ಹರಡಿತು. 17 ನೇ ಶತಮಾನದಲ್ಲಿ ಡೆಂಗ್ಯೂ ತರಹದ ಅನಾರೋಗ್ಯದ ಸಾಂಕ್ರಾಮಿಕ ರೋಗಗಳ ವಿವರಣೆಗಳಿವೆ. 18 ನೇ ಶತಮಾನದಲ್ಲಿ ಜಕಾರ್ತಾ, ಕೈರೋ ಮತ್ತು ಫಿಲಿಡೆಲ್ಫಿಯಾದಲ್ಲಿ ಸಾಂಕ್ರಾಮಿಕ ರೋಗಗಳು ಡೆಂಗ್ಯೂನಿಂದ ಉಂಟಾದ ಸಾಧ್ಯತೆಯಿದೆ.
ಡೆಂಗ್ಯೂ ರೋಗ ಬರುವುದು ಹೇಗೆ?
ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ.
ಸೋಂಕಿನ ಪರಿಣಾಮವೇನು?
ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.