ಬೆಂಗಳೂರು: ನಟ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಅವರು ಉಳಿದುಕೊಂಡಿದ್ದಾರೆ. ನಟ ದರ್ಶನ್ ಅವರ ಖೈದಿ ನಂಬರ್ 6106 ಆಗಿದೆ. ಇದೀಗ, 6106 ಸ್ಟಿಕ್ಕರ್ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್,
ಈ ಮೂಲಕ ತಮ್ಮ ಮೆಚ್ಚಿನ ‘ಡಿ ಬಾಸ್;ಗೆ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಖೈದಿ ನಂಬರ್ 6106 ಬಳಸಿ ದರ್ಶನ್ ಭಾವಚಿತ್ರವನ್ನ ರಚಿಸಲಾಗಿದೆ. ಸದ್ಯ ದರ್ಶನ್ ಅಭಿಮಾನಿಗಳಿಗೆ ಈ ನಂಬರ್ ತುಂಬಾ ಫೇಮಸ್ ಆಗಿದೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಖೈದಿ ನಂಬರ್ 6106 ಬಳಸಿಕೊಂಡು ನಟ ದರ್ಶನ್ ಫೋಟೋವನ್ನ ಬಿಡಿಸಿದ್ದಾನೆ.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ಈವರೆಗೂ ಅಭಿಮಾನಿಗಳ ಗಾಡಿಗಳಲ್ಲಿ ದರ್ಶನ್ ಖೈದಿ ನಂಬರ್ 6106 ಸ್ಟಿಕ್ಕರ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು, ಈ ಬೆನ್ನಲ್ಲೇ ಮತ್ತೆ ಇದೇ ನಂಬರ್ ಬಳಸಿ ಅಭಿಮಾನಿಯೊರ್ವ ದರ್ಶನ್ ಫೋಟೋ ಬಿಡಿಸಿದ್ದಾನೆ. ಈ ಪೋಸ್ಟರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.