ಹಾವೇರಿ:- ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಹಾವೇರಿಯ ಜಿಲ್ಲಾಪಂಚಾಯಿತಿ ತ್ರೈಮಾಸಿಕ ಸಭೆ ಜರುಗಿದೆ.
ಸಭೆಯಲ್ಲಿ ಹಾವೇರಿ ನಗರಕ್ಕೆ ಕುಡಿಯುವ ನೀರಿನ ವಿಚಾರಕ್ಕೆ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ.
30 ಕೋಟಿ ರೂಪಾಯಿ ಹಣ ಅನುಧಾನ ಬಿಡುಗಡೆ ಮಾಡಲಾಗಿದೆ ಆದರೆ ಈಗ ನೀರು ಬರುತ್ತಿಲ್ಲ.ಈ ಯೋಜನೆ ಏನು ಆಗಿದೆ? ಹಣ ದುರ್ಬಳಕೆ ಆಗಿದ್ದರೇ ನಿಮ್ಮಿಂದ ಹಣ ವಸೂಲಿ ಮಾಡುತ್ತಾನೆ. 30 ಕೋಟಿ ಸರಿಯಾಗಿ ಬಳಕೆ ಆಗದಿದ್ದರೆ. ನಿಮ್ಮನ್ನ ರೋಡಿನಲ್ಲಿ ನಿಲ್ಲಿಸುತ್ತೆನೆ. ಹಾವೇರಿ ನೀರು ಕೊಡಿ, ಇಲ್ಲ ಅಂದರೆ ಹಣ ವಸೂಲಿ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.
30 ಕೋಟಿ ಅನುಧಾನ ಏನು ಆಗಿದೆ ಅನ್ನೋದು ಬೇಕು. ಕಾಮಗಾರಿ ಬಗ್ಗೆ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಜನಪ್ರತಿನಿಧಿಗಳು ಗೊತ್ತಿಲ್ಲ. ಇವರನ್ನ ಅಮಾನತು ಮಾಡಿ ಎಂದು ಡಿಸಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಬ್ಯಾಡಗಿ ಬಸವರಾಜ್ ಶಿವಣ್ಣನವರ್, ಹಾನಗಲ್ ಶಾಸಕ ಶ್ರೀವಾಸ ಮಾನೆ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.