ಬೆಂಗಳೂರು:– ಕಿಲ್ಲರ್ ವಾಟರ್ ಟ್ಯಾಂಕರ್ ಗೆ ಯುವಕ ಬಲಿಯಾಗಿರುವ ಘಟನೆ ಕೊತ್ತನೂರು ದಿಣ್ಣೆಯ ಆರ್ ಬಿಐ ಲೇಔಟ್ ಮುಖ್ಯರಸ್ತೆಯಲ್ಲಿ ಜರುಗಿದೆ.
ರಸ್ತೆ ಮಧ್ಯೆಯೇ ಯುವಕ ಹೆಣವಾಗಿ ಬಿದ್ದ. ಕಿರಣ್ ಕುಮಾರ್ ಮೃತ ದುರ್ದೈವಿ ಎನ್ನಲಾಗಿದೆ. ಯುವಕ ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯವನದ ಯುವಕನಾಗಿದ್ದು, ಬೇಕರಿಯೊಂದರಲ್ಲಿ ಕಿರಣ್ ಕೆಲಸ ಮಾಡ್ತಿದ್ದ. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸ ಭೇಟಿ ಪರಿಶೀಲನೆ ಮಾಡಿದ್ದಾರೆ.
ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟ್ಯಾಂಕರ್ ಚಾಲಕ ಕಿರಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.