ಭಾರತದಲ್ಲಿ ಟಾಟಾ ಮೋಟಾರ್ಸ್ ಸುರಕ್ಷಿತ ವಾಹನಗಳ ತಯಾರಿಕೆಗೆ ಹೆಸರುವಾಸಿಯಾಗಿದೆ.ಟಿಯಾಗೊ ಇವಿ, ಟಿಗೊರ್ ಇವಿ, ಪಂಚ್ ಇವಿ ಹಾಗೂ ನೆಕ್ಸಾನ್ ಇವಿಗಳನ್ನು ಮಾರಾಟಗೊಳಿಸುವ ಮೂಲಕ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿಯೂ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.
ಹ್ಯಾರಿಯರ್ ಇವಿ ಈಗ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು ಶ್ರೀಸಾಮಾನ್ಯರ ಪಾಲಿಗೆ ಇದೊಂದು ಜಾದೂ ಕೂಡ . ಇದರ ವಿನ್ಯಾಸ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Good News: ಪಂಜಾಬ್ ನ್ಯಾಷನಲ್ ಬ್ಯಾಂಕ್’ನಿಂದ 2700 ಹುದ್ದೆ ನೇಮಕಾತಿ: ಯಾವುದೇ ಪದವೀಧರರು ಅರ್ಜಿ ಹಾಕಿ..!
ವಿನ್ಯಾಸ:
ಟಾಟಾ ಹ್ಯಾರಿಯರ್ ಇವಿ (Tata Harrier EV) ವಿನ್ಯಾಸವು ಬಹುತೇಕ ಇಂಧನ ಚಾಲಿತ ಮಾದರಿ (ಮಾಡೆಲ್)ಗೆ ಹೋಲಿಕೆಯಾಗಲಿದೆ. ಆದಾಗ್ಯೂ ನವೀನವಾದ ಅಲಾಯ್ ವೀಲ್ಗಳು ಮತ್ತು ಹೊಸದಾದ ಬಂಪರ್ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸೀವೀಡ್ ಗ್ರೀನ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಸಿಗಬಹುದು ಎನ್ನಲಾಗಿದೆ.
ವಿಶೇಷತೆ:
ನೂತನ ಟಾಟಾ ಹ್ಯಾರಿಯರ್ ಇವಿಯು ಅತಿಹೆಚ್ಚು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ ಎನ್ನಲಾಗಿದೆ. ಅಪಾಯದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಲು 6-ಏರ್ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಹೊಸ ಟಾಟಾ ಹ್ಯಾರಿಯರ್ ಇವಿಯು ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ (Battery Pack) ಹೊಂದಿರಲಿದ್ದು, ಸಂಪೂರ್ಣ ಚಾರ್ಜ್ನಲ್ಲಿ 500 ಕಿಲೋಮೀಟರ್ಗೂ ಹೆಚ್ಚು ರೇಂಜ್ (ಮೈಲೇಜ್) ನೀಡಬಹುದು ಎಂದು ಅಂದಾಜಿಸಲಾಗಿದೆ. ಬಹುತೇಕ AWD (ಆಲ್ – ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರಬಹುದು ಎಂದು ತಿಳಿದುಬಂದಿದೆ.
( ಕೃಪೆ : ಡ್ರೈವ್ ಸ್ಪಾರ್ಕ್ )