ಹೊಳೆಯುವ, ದಟ್ಟವಾದ ಮತ್ತು ಆರೋಗ್ಯಕರ ಕೂದಲನ್ನು ಹೊಂದಲು ಯಾರು ಬಯಸುವುದಿಲ್ಲ? ಆದರೆ ಇವೆಲ್ಲವನ್ನೂ ಪಡೆಯಲು ಸರಿಯಾದ ಕೂದಲ ರಕ್ಷಣೆಯ ಕ್ರಮವನ್ನು ಅನುಸರಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮತ್ತು ಕೂದಲಿನ ಆರೋಗ್ಯಕ್ಕಾಗಿ ಗಿಡಮೂಲಿಕೆಗಳು ಮತ್ತು ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಅವಶ್ಯಕ.
Lemon Benefit: ಹೃದಯದ ಆರೋಗ್ಯಕ್ಕೆ ನಿಂಬೆಹಣ್ಣು ಎಷ್ಟು ಪ್ರಯೋಜನಕಾರಿ ಗೊತ್ತೇ?!
ಆದರೆ ಕೂದಲಿನ ಆರೈಕೆಯು ತ್ವಚೆಗಿಂತಲೂ ಕಠಿಣ. ಯಾಕೆಂದರೆ ಇದನ್ನು ನಿತ್ಯವೂ ತುಂಬಾ ಜತನದಿಂದ ಆರೈಕೆ ಮಾಡಬೇಕಾಗುತ್ತದೆ. ಧೂಳು, ಕಲುಷಿತ ವಾತಾವರಣ, ಬಿಸಿಲು ಇತ್ಯಾದಿಗಳಿಂದ ರಕ್ಷಿಸಬೇಕಾಗುತ್ತದೆ
ಕೂದಲನ್ನು ಕತ್ತರಿಸಿದರೆ ಆಗ ಇದರಿಂದ ಕೂದಲಿನ ಬೆಳವಣಿಗೆಯು ವೇಗ ಪಡೆಯುವುದಿಲ್ಲ. ಆದರೆ ಕೂದಲಿನ ಆರೋಗ್ಯಕಾರಿ ನಿರ್ವಹಣೆ ಮತ್ತು ಕೂದಲಿನ ತೋರಿಕೆ ಮೇಲೆ ಪ್ರಮುಖ ಪಾತ್ರ ವಹಿಸುವುದು. ಇದರ ಪರಿಣಾಮವಾಗಿ ಕೂದಲು ವೇಗವಾಗಿ ಬೆಳೆಯುವಂತೆ ಆಗುವುದು. ನಿಯಮಿತವಾಗಿ ಕೂದಲು ಕತ್ತರಿಸುತ್ತಾ ಇದ್ದರೆ ಆಗುವ ಲಾಭಗಳು.
ಕೂದಲು ಉದ್ದ ಬೆಳೆಯುತ್ತಿದ್ದಂತೆ, ಆಗ ಕೂದಲಿನ ತುದಿಯು ಬೇಗನೆ ಹಾನಿಗೀಡಾಗಬಹುದು ಮತ್ತು ತುದಿಯು ಒಡೆಯಬಹುದು. ಇದರ ಪರಿಣಾಮವಾಗಿ ಕೂದಲು ತುಂಡಾಗಬಹುದು ಮತ್ತು ಅದು ಗಿಡ್ಡ ಹಾಗೂ ತೆಳುವಾಗಿ ಕಾಣಿಸಬಹುದು. ನಿಯಮಿತವಾಗಿ ಕೂದಲು ಕತ್ತರಿಸುತ್ತಾ ಇದ್ದರೆ ಆಗ ಇದರಿಂದ ಕೂದಲಿನ ತುದಿ ಒಡೆಯುವುದು, ಹಾನಿಯಾಗುವುದು ತಪ್ಪುವುದು
ಸಂಜೆ ವೇಳೆ ಉಗುರು ಕತ್ತರಿಸುವ ಅಭ್ಯಾಸ ಇದ್ಯಾ!?..ಯುವತಿಯರೇ ಈ ಸುದ್ದಿ ಓದಲೇಬೇಕು!
ಕೂದಲಿಗೆ ಹಾನಿಯಾದರೆ ಆಗ ಇದರಿಂದ ಕೂದಲು ತುಂಡಾಗುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಕೂದಲಿನ ತುದಿಯನ್ನು ಕತ್ತರಿಸುವ ಮೂಲಕ ತುಂಡಾಗುವುದನ್ನು ತಪ್ಪಿಸಬಹುದು ಮತ್ತು ಕೂದಲು ಉದ್ದವಾಗಿ, ವೇಗವಾಗಿ ಬೆಳೆಯುವಂತೆ ಮಾಡಬಹುದು.